ಮಂಗಳೂರು: ಇಸ್ವ ಆಂಪಿಯರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ, ಸೇವಾ ಮಳಿಗೆ ಆರಂಭ

Update: 2023-08-18 17:05 GMT

ಮಂಗಳೂರು: ಆಂಪಿಯರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವಾ ಮಳಿಗೆ ಇಸ್ವ ಮೋಟಾರ್ಸ್ ನ ನೂತನ ಪ್ರದರ್ಶನ ಮತ್ತು ಮಾರಾಟ ಮತ್ತು ಗ್ರಾಹಕ ಸೇವಾ ಮಳಿಗೆಯನ್ನು ನಗರದ ಬಿಜೈ ಕಾಪಿಕಾಡ್‍ನ ಲೋಟಸ್ ಆದಿತ್ಯ ಕಟ್ಟಡದಲ್ಲಿಂದು ನವ ಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅನಘ ಸಮೂಹ ಸಂಸ್ಥೆ ಗಳ ಮುಖ್ಯಸ್ಥ ಸಾಂಬ ಶಿವರಾವ್ ಅವರು ಕೈ ಗೊಳ್ಳುವ ಪ್ರತಿ ಕೆಲಸದಲ್ಲಿ ನೈತಿಕ ಮೌಲ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ನೇರ ನಡೆ ನುಡಿ ಯೊಂದಿಗೆ, ಪ್ರಾಮಾಣಿಕತೆ, ಪರಿಶ್ರಮ, ಜ್ಞಾನದಿಂದ ಉದ್ಯಮದಲ್ಲಿ ಅವರ ಪ್ರಗತಿಗೆ ಕಾರಣವಾಗಿದೆ.ಅವರು ತಮ್ಮ ಉದ್ಯಮದಲ್ಲಿ ಇನ್ನಷ್ಟು ಸಾಧಿಸಿ ಯಶಸ್ಸು ಗಳಿಸಲಿ ಎಂದು ವೆಂಕಟ ರಮಣ ಅಕ್ಕ ರಾಜು ಶುಭ ಹಾರೈಸಿದರು.

ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ತನಿಕೆಲ್ಲ ಭರಣಿ ಮಾತನಾಡಿ, ಎಲೆಕ್ಟ್ರಿಕಲ್ ವಾಹನಗಳು ಪರಿಸರಕ್ಕೆ ಪೂರಕ.ಈ ಪರಿಸರ ಸ್ನೇಹಿ ವಾಹನಗಳು ಭವಿಷ್ಯದಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚುವ ಅವಕಾಶ ವಿದೆ ಎಂದು ಶುಭ ಹಾರೈಸಿದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಗತ್ತು ವೇಗವಾಗಿ ಬೆಳೆಯುತ್ತಿರುವಾಗ ಪೆಟ್ರೋಲ್, ಡೀಸೆಲ್ ಬದಲು ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗ ಸೇರಿದಂತೆ ಸಾಮಾನ್ಯರಿಗೂ ಉಪಯುಕ್ತವಾದ ವಾಹನವಾಗಲಿದೆ. ರಿವರ್ಸ್ ಗೇರ್ ,ಮಿತ ವಿದ್ಯುತ್‍ನಲ್ಲಿ ಓಡುವ ಇಂತಹ ವಾಹನಗಳಿಗೆ ಬೇಡಿಕೆ ಹೆಚ್ಚು ತ್ತಿದೆ ಎಂದರು.

ಈ ಸಂದರ್ಭ ಅನಘ ರಿಫೈನರೀಸ್‍ನ ಮುಖ್ಯಸ್ಥ ಸಾಂಬ ಶಿವರಾವ್ ಹಾಗೂ ಅವರ ಪುತ್ರರಾದ ವೆಂಕಟ ಫಣಿ ನಾದೆಲ್ಲಾ, ನಾಗಾ ವೆಂಕಟ ಶಿವು ಅವರ ಕುಟುಂಬದ ಸದಸ್ಯರ ರಾದ ಸತ್ಯವಣಿ ಸಾಂಬ ಶಿವರಾವ್,ಸಾತ್ವಿಕ, ದೀಪ್ತಿ,ಆಂಪಿಯರ್ ಡೀಲರ್ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಅನಿಂ‍ದ್ಯ ಮಿತ್ರಾ,ಆಂಪಿಯರ್ ವಲಯ ಸೇಲ್ಸ್ ಮ್ಯಾನೇಜರ್ ಪ್ರಾಣೇಶ್ ಎಸ್, ಆಂಪಿಯರ್ ರೀಜನಲ್ ಸೇಲ್ಸ್ ಮ್ಯಾನೇಜರ್ ಇಂದ್ರ ನೀಲ್ ದತ್ತ ಮೊದಲಾದವರು ಉಪಸ್ಥಿತರಿದ್ದರು.

*ಆಂಪಿಯರ್ ದ್ವಿಚಕ್ರ ವಾಹನಗಳ ವಿಶೇಷತೆ:-ಆಂಪಿಯರ್ ಪ್ರೈಮಸ್, ಝೀಲ್ ಇಎಕ್ಸ್, ಮ್ಯಾಗ್ನಸ್ ಇಎಕ್ಸ್ ಹೀಗೆ ವಿಭಿನ್ನ ಮಾದರಿಯ ಸುರಕ್ಷಿತ, ಆರಾಮದಾಯಕ, ದೃಢವಾದ ಸಾಮಥ್ರ್ಯದ ಸ್ಕೂಟರ್ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವನ್ನು ಆಂಪಿಯರ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕಲ್ ಸ್ಕೂಟರ್ ದ್ವಿಚಕ್ರ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.ಇತ್ತೀಚಿನ ನಾಲ್ಕು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಗ್ರಾಹಕರು ಆಂಪಿಯರ್ ವಾಹನವನ್ನು ಬಳಸುತ್ತಿದ್ದಾರೆ.ಸ್ಥಳೀಯ ರಸ್ತೆ ಸಂಚಾರ ಸ್ಥಿತಿಗೆ ಪೂರಕವಾಗಿ ಸ್ಕೂಟರ್ ವಿನ್ಯಾಸಗೊಳಿಸಲಾಗಿದ್ದು, ಅತ್ಯುತ್ತಮ ಮೈಲೇಜ್ ಸಿಗಲಿದೆ. ಇಸ್ವ ಮೋಟಾರ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಅಧಿಕೃತ ಡೀಲರ್ ಶಿಪ್‍ವನ್ನು ಪಡೆದುಕೊಂಡಿದೆ ಎಂದು ಆಂಪಿಯರ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮೊದಲ ಗ್ರಾಹಕರಿಗೆ ವಾಹನದ ಕೀಲಿ ಕೈಯನ್ನು ಹಸ್ತಾಂತರ ಮಾಡಲಾಯಿತು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News