ಮಂಗಳೂರು: ಕನ್ಯಾ ಮರಿಯಮ್ಮನ ನೊವೆನಾ ಆಚರಣೆ

Update: 2023-09-04 12:04 GMT

ಮಂಗಳೂರು: ಕನ್ಯಾ ಮರಿಯಮ್ಮರ ಹುಟ್ಟು ಹಬ್ಬವನ್ನು ಸೆ.೮ರಂದು ಆಚರಿಸಲಾಗುತ್ತಿದ್ದು, ಅದರ ಪೂರ್ವಸಿದ್ಧತೆಯಾಗಿ ನಗರದ ಗಾರ್ಡಿಯನ್ ಏಂಜಲ್, ಆಂಜೆಲೊರ್, ನಾಗೋರಿ ಚರ್ಚ್‌ಗಳಲ್ಲಿ 9 ದಿನಗಳ ನೊವೆನಾವು ಆರಂಭಗೊಂಡಿವೆ.

ಪ್ರತಿದಿನ ಸಂಜೆ ಪ್ರಧಾನ ಧರ್ಮಗುರು ವಂ. ವಿಲಿಯಂ ಮಿನೇಜಸ್ ಹಾಗೂ ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಪಿಂಟೊರ ನೇತೃತ್ವದಲ್ಲಿ ನಡೆಯುವ ಬಲಿಪೂಜೆಯಲ್ಲಿ ನೂರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಬಲಿಪೂಜೆಯ ಬಳಿಕ ಕನ್ಯಾ ಮರಿಯಮ್ಮರಿಗೆ ಹೂ ಅರ್ಪಿಸುವ ವಿಧಿಯು ನಡೆಯುತ್ತದೆ. ತದನಂತರ ನೆರೆದವರೆಲ್ಲರಿಗೂ ದಾನಿಗಳು ಕೊಡಮಾಡಿದ ಸಿಹಿ ತಿಂಡಿಯನ್ನು ಹಂಚಲಾಗುತ್ತದೆ. ಧಾರ್ಮಿಕ ವಿಧಿಯನ್ನು ನೆರವೇರಿಸಲು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಧರ್ಮಗುರುಗಳಿಗೆ ಸಹಕಾರ ನೀಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News