ಮಂಗಳೂರು: ಪಾರ್ಟ್‌ಟೈಮ್ ಕೆಲಸದ ಸಂದೇಶ ಕಳುಹಿಸಿ ಆನ್‌ಲೈನ್ ವಂಚನೆ

Update: 2023-08-30 17:31 GMT

ಮಂಗಳೂರು, ಆ.30: ಪಾರ್ಟ್‌ಟೈಮ್ ಕೆಲಸದ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಅಪರಿಚಿತ ತಂಡವೊಂದು ಆನ್‌ಲೈನ್ ಮೂಲಕ 10.88 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ.

ಅಕ್ಯುಯೆಟ್ ಮೀಡಿಯಾ ಕಂಪೆನಿ (Acuate Media Company) ಯ ಪ್ರತಿನಿಧಿಯೆಂದು ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಕಳುಹಿಸಿ, ಬಳಿಕ ಆನ್ ಲೈನ್ ಮೂಲಕ ಪ್ರತಿದಿನ 2-3 ಸಾವಿರ ಸಂಪಾದನೆ ಮಾಡಬಹುದು ಎಂದು ನಂಬಿಸಿ ಅವರ ಬ್ಯಾಂಕ್ ಖಾತೆಗಳಿಂದ ಆ.26ರಿಂದ ಆ.28 ತನಕ ಹಣವನ್ನು ವರ್ಗಾಯಿಸಿ ವಂಚಿಸಿರುವುದಾಗಿ ಸೆನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News