ಮಂಗಳೂರು: ಕಾರ್ಮಿಕ ಸಂಘಟನೆಗಳ ಧರಣಿ

Update: 2023-08-14 17:41 GMT

ಮಂಗಳೂರು, ಆ.14: ಬ್ರಿಟಿಷರ ವಿರುದ್ಧ ಕಾರ್ಮಿಕ ವರ್ಗ, ರೈತಾಪಿ ಜನತೆಯು ನಡೆಸಿದ ಸಮರಶೀಲ ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯವು ಕಾರ್ಪೊರೇಟ್ ಹಾಗೂ ಕೋಮುವಾದಿಗಳ ಪಾಲಾಗಿದ್ದು, ಅದನ್ನು ರಕ್ಷಿಸುವಂತೆ ಒತ್ತಾಯಿಸಿ ಸಿಐಟಿಯು, ಎಐಕೆಎಸ್, ಎಐಎಡಬ್ಲ್ಯುಯು ಕಾರ್ಮಿಕ ಸಂಘಟನೆಗಳ ವತಿಯಿಂದ ನಗರದ ಪುರಭವನದ ಮುಂದೆ ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು ಸೋಮವಾರ ಮುಸ್ಸಂಜೆ ಸುಮಾರು 7 ಗಂಟೆಗೆ ಧರಣಿ ಆರಂಭಿಸಿದರು.

ಧರಣಿಯ ವೇಳೆ ‘ಸಂವಿಧಾನ ಮಹಾತ್ಮೆ’ ಎಂಬ ಯಕ್ಷಗಾನ ತಾಳಮದ್ದಲೆ ನಡೆಸಲಾಯಿತು.

ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಬೆಲೆ ಏರಿಕೆ ತಡೆಗಟ್ಟಲು, ವಿದ್ಯುತ್ ಮಸೂದೆ ಹಿಂಪಡೆಯಲು ಮತ್ತು ಕೋಮು ದ್ವೇಷ ರಾಜಕಾರಣವನ್ನು ನಿಲ್ಲಿಸಲು ಆಗ್ರಹಿಸಲಾಯಿತು.

ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಭಾರತವು 77ನೇ ಸ್ವಾತಂತ್ರ್ಯ ಉತ್ಸವದ ಆಚರಣೆಗೆ ಅಣಿಯಾಗುತ್ತಿದೆ. ಆದರೆ ಯಾವ ಕನಸನ್ನು ಹೊತ್ತು ಭಾರತದ ಸ್ವಾತಂತ್ರ್ಯ ಹೋರಾಟ ನಡೆಸಿತೋ ಅಂತಹ ಕನಸಿನ ಭಾರತ ನಿರ್ಮಾಣವಾಗಲೇ ಇಲ್ಲ. ಕೇಂದ್ರ ಸರಕಾರವು ದೇಶದ ಅಭಿವೃದ್ಧಿಯ ಬದಲು ಅಪಾಯಕ್ಕೆ ತಂದೊಡ್ಡಿವೆ ಎಂದು ಆಪಾದಿಸಿದರು.

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ವಿವಿಧ ಸಂಘಟನೆಗಳ ನಾಯಕರಾದ ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ವಸಂತ ಆಚಾರಿ, ಕೃಷ್ಣಪ್ಪ ಸಾಲಿಯಾನ್, ಮುನೀರ್ ಕಾಟಿಪಳ್ಳ, ಡಾ.ಕೃಷ್ಣಪ್ಪಕೊಂಚಾಡಿ, ಸುಕುಮಾರ್, ಬಿಎಂ ಭಟ್ ಮಾತನಾಡಿದರು.

ಸತ್ಯಾಗ್ರಹದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ರಾಧಾ ಮೂಡುಬಿದಿರೆ, ರಮಣಿ, ಪದ್ಮಾವತಿ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್, ನೊಣಯ್ಯಾ ಗೌಡ, ವಸಂತಿ ಕುಪ್ಪೆಪದವು, ಶಂಕರ ಮೂಡುಬಿದಿರೆ, ಸದಾಶಿವ ದಾಸ್, ವಾಸುದೇವ ಉಚ್ಚಿಲ್, ಜನಾರ್ದನ ಕುತ್ತಾರ್, ಮಹಮ್ಮದ್ ಮುಸ್ತಫಾ, ಅನ್ಸಾರ್, ಗಿರಿಜಾ ಮೂಡುಬಿದಿರೆ, ವಿಲ್ಲಿ ವಿಲ್ಸನ್, ಚಂದ್ರಹಾಸ ಪಿಲಾರ್, ಮೋಹನ್ ಚಂದ್ರ, ಸುಧಾಕರ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ತಯ್ಯುಬ್ ಬೆಂಗರೆ, ವಿನೀತ್ ದೇವಾಡಿಗ, ವಿನುಷ ರಮಣ, ರಾಧಾಕೃಷ್ಣ, ಕೃಷ್ಣ ತಣ್ಣೀರುಬಾವಿ, ಶೇಖರ್ ವಾಮಂಜೂರು, ವಿನೋದ್, ಭಾರತಿ ಬೋಳಾರ, ವಿಲಾಸಿನಿ ಮುಂತಾದವರು ಪಾಲ್ಗೊಂಡಿದ್ದರು.

ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೋ, ಸ್ಟೀವನ್ ರಾಡ್ರಿಗಸ್, ಅಜಿತ್ ಮರೋಳಿ ಮತ್ತಿತರರು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News