ಮಂಗಳೂರು : ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ನಾಪತ್ತೆ

Update: 2023-09-01 14:59 GMT

ಮಂಗಳೂರು, ಸೆ.1: ಮುಲ್ಕಿ ಮತ್ತು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

*ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಸಮೀಪದ ಬೆಳ್ಳಾಯಾರು ಗ್ರಾಮದ ಕೊರ್ದಬ್ಬು ದೇವಸ್ಥಾನದ ಬಳಿ ವಾಸವಾಗಿದ್ದ ಹಸೀನಾ (25) ಮತ್ತಾಕೆಯ ಜೊತೆಗಿದ್ದ ರಾಜಸ್ಥಾನ ಮೂಲದ 17ರ ಹರೆಯದ ಬಾಲಕಿ ಆ.30ರಂದು ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಅಡಿ ಎತ್ತರದ, ಎಣ್ಣೆಕಪ್ಪು ಮೈಬಣ್ಣದ, ದುಂಡು ಮುಖದ ಹಸೀನಾ ಕಾಣೆಯಾಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ.

5.1 ಅಡಿ ಎತ್ತರದ, ಎಣ್ಣೆಕಪ್ಪು ಮೈ ಬಣ್ಣದ, ಕೋಲು ಮುಖ ಹೊಂದಿರುವ ಬಾಲಕಿ ಕಾಣೆಯಾಗುವಾಗ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ಗುಜರಾತಿ ಭಾಷೆ ಮಾತನಾಡುತ್ತಾರೆ.

ಈ ಇಬ್ಬರು ಕಂಡು ಬಂದಲ್ಲಿ ಮುಲ್ಕಿ ಪೊಲೀಸ್ ಠಾಣೆ (0824-2290533/9480805359/9480805332)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ನಗರದ ಅತ್ತಾವರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಪವಿತ್ರಾ (19) ಎಂಬಾಕೆಯು ಆ.31ರಂದು ಕಾಣೆಯಾಗಿದ್ದಾರೆ. 5 ಅಡಿ ಎತ್ತರದ, ಸಪೂರ ಶರೀರದ, ಗೋಧಿ ಮೈಬಣ್ಣದ ಈಕೆ ಕಾಣೆಯಾದಾಗ ನೀಲಿಬಣ್ಣದ ನೈಟಿ ಧರಿಸಿದ್ದಾರೆ. ಹಿಂದಿ, ತೆಲುಗು, ಕನ್ನಡ ಭಾಷೆ ಮಾತನಾಡುತ್ತಾರೆ.

ಈ ಬಗ್ಗೆ ಫಕೀರಪ್ಪ ಛಲವಾದಿ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಕಂಡು ಬಂದಲ್ಲಿ ಪಾಂಡೇಶ್ವರ ಠಾಣೆ (0824-2220516/9480805346/9480805339)ಯನ್ನು ಸಂಪರ್ಕಿಬಹುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News