ಮಂಗಳೂರು: ವ್ಯಕ್ತಿ ನಾಪತ್ತೆ

Update: 2024-09-19 14:45 GMT

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿನಗರದ ನೀತಿನಗರ ಎಂಬಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ಲೆನ್ಸಿ ಜೆರಾಲ್ಡ್ ಪಿರೇರಾ (53) ಕಾಣೆಯಾದ ಬಗ್ಗೆ ಸಹೋದರಿ ಫ್ಲೇವಿ ಡಿಸೋಜ ಎಂಬವರು ದೂರು ನೀಡಿದ್ದಾರೆ.

ಹೊಟೇಲ್, ಬಾರ್, ಕ್ಯಾಟರಿಂಗ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಲೆನ್ಸಿ ಜೆರಾಲ್ಡ್ ಪಿರೇರಾ ಆಗಾಗ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ. ಆ.30ರಂದು ಲೆನ್ಸಿ ಜೆರಾಲ್ಡ್ ಪಿರೇರಾ ಕೆಲಸ ಮಾಡುತ್ತಿದ್ದ ರೇಗೋ ಕ್ಯಾಟರಿಂಗ್‌ನ ಮಾಲಕಿ ಅನಿತಾ ರೇಗೋ ಅವರು ಎರಡು ವಾರದಿಂದ ಲೆನ್ಸಿ ಜೆರಾಲ್ಡ್ ಪಿರೇರಾ ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿಸಿದ ಬಳಿಕ ಹುಡುಕಾಟ ನಡೆಸಲಾಗಿದೆ. ಮೊಬೈಲ್ ಕೂಡಾ ಸ್ವಿಚ್ಡ್ ಆಫ್ ಆಗಿದೆ. ಹಾಗಾಗಿ ನಾಪತ್ತೆಯಾದ ಲೆನ್ಸಿ ಜೆರಾಲ್ಡ್ ಪಿರೇರಾರನ್ನು ಪತ್ತೆ ಹಚ್ಚಿ ಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News