ಮಂಗಳೂರು: ನ. 16ರಂದು ಶಕ್ತಿ ಫೆಸ್ಟ್ -2024

Update: 2024-10-08 09:02 GMT

ಮಂಗಳೂರು, ಅ.8: ಶಕ್ತಿ ಶಿಕ್ಷಣ ಸಂಸ್ಥೆಯ ವತಿಯಿಂದ ನ. 16ರಂದು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 8ರಿಂದ 12ನೆ ತರಗತಿಯ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸುವ ‘ಶಕ್ತಿಫೆಸ್ಟ್ 2024’ ಆಯೋಜಿಸಲಾಗಿದೆ.

ಪಿಯುಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 14 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಶಕ್ತಿ ಎಜುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾಹಿತಿ ನೀಡಿದರು.

ಪಿಯುಸಿ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ದೆ, ಉತ್ಪನ್ನ ಬಿಡುಗಡೆ ಶಾರ್ಕ್ ಟ್ಯಾಂಕ್, ರಂಗೋಲಿ- ವಿಷಯ ನವರಾತ್ರಿ, ಮುಖವರ್ಣಿಕೆ- ವಿಷಯ ಡ್ರಗ್ ಅಬ್ಯೂಸ್, ಹೂಗುಚ್ಚ ತಯಾರಿ, ರೀಲ್ ಮೇಕಿಂಗ್, ಏಕ ವ್ಯಕ್ತಿ ಗಾಯನ - ಭಾವಗೀತೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ಕುಣಿ, ಪೋಸ್ಟರ್ ಮೇಕಿಂಗ್- ಸೈಬರ್ ಸೆಕ್ಯೂರಿಟಿ, ಪೆನ್ಸಿಲ್ ಸ್ಕೆಚ್, ವಿಜ್ಞಾನ ಮಾದರಿ- ಪರಿಸರ ಸ್ನೇಹಿ ನವ ಅವಿಷ್ಕಾರ, ಬೀದಿ ನಾಟಕ ಸ್ಪರ್ಧೆ - ಸಾಮಾಜಿಕ ಕಳಕಳಿ, ನಿಧಿ ಬೇಟೆ, ಏಕ ವ್ಯಕ್ತಿ ಗಾಯನ ಸ್ಪಧೆ- ಭಾವಗೀತೆ ವಿಭಾಗಗಳಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.

ಒಂದು ಶಾಲೆ ಅಥವಾ ಕಾಲೇಜಿನಿಂದ ಒಂದು ತಂಡಕ್ಕೆ ಅವಕಾಶವಿದ್ದು, ಒಬ್ಬ ವಿದ್ಯಾರ್ಥಿ ಎರಡು ಸ್ಪರ್ಧೆಗಲಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ತಂಡದ ಸದಸ್ಯರ ಗರಿಷ್ಟ ಮಿತಿ 25 ಆಗಿದ್ದು, ಭಾಗವಹಿಸುವ ತಂಡವು ಕಾಲೇಜಿನ ಅಥವಾ ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಪತ್ರದೊಂದಿಗೆ ಹಾಜರಿರಬೇಕು. ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಹಾಗೂ ಶಾಲಾ ಐಡಿ ಧರಿಸಿ ಬೆಳಗ್ಗೆ 8.30ಕ್ಕೆ ನೋಂದಣಿಗೆ ಹಾಜರಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತಲಾ 1-- ಕೂಯ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು ನ. 11 ಕೊನೆಯ ದಿನವಾಗಿರುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತ ಸೂರಜ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್. ಹಾಗೂ ಕಾರ್ಯಕ್ರಮ ಸಂಯೋಜಕರಾದ ಸಬಿತ ಕಾಮತ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News