ಮಿತ್ತೂರು : ನೌರತುಲ್ ಮದೀನಾ ಶಾಲಾ ಸಂಸತ್ ಚುನಾವಣೆ

Update: 2024-07-15 06:33 GMT

ಬಂಟ್ವಾಳ : ಮಿತ್ತೂರು ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಂಸತ್ತಿನ ಚುನಾವಣೆ ಶಾಲೆಯಲ್ಲಿ ನಡೆಯಿತು.

ಶಾಲಾ ಸಂಸತ್ ನಾಯಕನಾಗಿ ಮುಹಮ್ಮದ್ ಮರ್ಝುಕ್, ಉಪ ನಾಯಕನಾಗಿ ಮುಹಮ್ಮದ್ ಅಝೀಮ್, ಶಿಸ್ತು ಮಂತ್ರಿಯಾಗಿ ಮುಹಮ್ಮದ್ ರಿಹಾನ್ ಮತ್ತು ಫಾತಿಮಾ ರುಮೈಸಾ, ಆರೋಗ್ಯ ಮಂತ್ರಿಯಾಗಿ ಮುಹಮ್ಮದ್ ರಿಫಾತ್ ಮತ್ತು ಅಝ್ವೀನಾ, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ಇಬ್ರಾಹಿಂ ಮತ್ತು ಮಫರುನ್ನೀಸಾ, ಸಾಂಸ್ಕೃತಿಕ ಮಂತ್ರಿಯಾಗಿ ಶಮ್ಮಾಸ್ ಆಯ್ಕೆಯಾದರು.

ವಿಜೇತರನ್ನು ಅಭಿನಂದಿಸಿದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲೆಯ ಪ್ರಾಂಶುಪಾಲ ಮುಹಮ್ಮದ್ ಮುಸ್ತಫ ಮಾತನಾಡಿ , ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪೋಷಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಶಾಲಾ ಸಂಸತ್ ಚುನಾವಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದರು .

ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ಎಲ್ಲ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಅನುಸರಿಸಲಾಯಿತು. ಚುನಾವಣೆಗೆ ಬೇಕಾದ ಸಿಬ್ಬಂದಿ ನೇಮಕ, ಪೊಲೀಸ್‌ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹೀಗೆ ಪ್ರತಿಯೊಂದು ಪಾತ್ರಗಳನ್ನು ನಿರ್ವಹಿಸಲಾಗಿತ್ತು.

ಚುನಾವಣಾ ‌ ರಿಟರ್ನಿಂಗ್ ಅಧಿಕಾರಿಗಳಾಗಿ ರಝನ್ ಮುಈನಿ, ಫಝಲ್ ಮುಈನಿ ಹಾಗೂ ಸಿನಾನ್ ಮುಈನಿ, ಚುನಾವಣಾ ಅಧಿಕಾರಿಗಳಾಗಿ ಸಫಾನಾ, ಆಮಿನ ಹಾಗೂ ಫಾತಿಮಾ ಕಾರ್ಯನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News