ಶಾಸಕ ಭರತ್ ಶೆಟ್ಟಿ ಒಂದು ಧರ್ಮವನ್ನು ಗುರಿಯಾಗಿಸಿ, ಬಹಿರಂಗವಾಗಿ ಪ್ರತಿಭಟನೆಗೆ ಕರೆಕೊಡುವುದು ಅಪರಾಧವಲ್ಲವೆ ?: ಮುನೀರ್ ಕಾಟಿಪಳ್ಳ

Update: 2023-07-28 17:58 GMT

ಮಂಗಳೂರು : ಶಾಸಕ ಭರತ್ ಶೆಟ್ಟಿ ಅವರು ಒಂದು ಧರ್ಮವನ್ನು ಗುರಿಯಾಗಿಸಿ, ಬಹಿರಂಗವಾಗಿ ಧರ್ಮವನ್ನು ಉಲ್ಲೇಖಿಸಿ ಪ್ರತಿಭಟನೆಗೆ ಕರೆ ಕೊಡುವುದು ಅಪರಾಧವಲ್ಲವೆ ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಪ್ರಶ್ನಿಸಿದ್ದಾರೆ.


ಉಡುಪಿ ವಿಚಾರದಲ್ಲಿ ಬಿಜೆಪಿ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜನರನ್ನು ಆಹ್ವಾನಿಸಲು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಕಿರುವ ಪೋಸ್ಟರ್ ಇದು. ನೇರವಾಗಿ "ಮುಸ್ಲಿಂ ವಿದ್ಯಾರ್ಥಿನಿಯರು" ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಲ್ಲಿ ವಿದ್ಯಾರ್ಥಿನಿಯರ ಧರ್ಮವನ್ನು ಪ್ರಧಾನ ರಾಜಕೀಯ ಪಕ್ಷ, ಓರ್ವ ಶಾಸಕ ಗುರುತಿಸಿ ಆರೋಪಿಸುವುದು ಎಷ್ಟು ಸರಿ ? ಒಂಬುದು ಒಂದು ಪ್ರಶ್ನೆಯಾದರೆ, ಸಂವಿಧಾನದ ಮೇಲೆ ಪ್ರತಿಜ್ಞೆಗೈದು ಪ್ರಮಾಣವಚನ ಸ್ವೀಕರಿಸಿದ ಶಾಸಕ ಒಂದು ಧರ್ಮವನ್ನು ಗುರಿಯಾಗಿಸಿ, ಬಹಿರಂಗವಾಗಿ ಧರ್ಮವನ್ನು ಉಲ್ಲೇಖಿಸಿ ಪ್ರತಿಭಟನೆಗೆ ಕರೆಕೊಡುವುದು ಅಪರಾಧವಲ್ಲವೆ ? ಇದು ಜನಾಂಗ ದ್ವೇಷಿ ನಡೆಯಲ್ಲವೆ ? ನಾಗರಿಕ ಸಮಾಜ ಇದನ್ನು ವಿರೋಧಿಸಬೇಕು. ಶಾಸಕರಿಗೆ ಛೀಮಾರಿ ಹಾಕಬೇಕು. ಅಷ್ಟಕ್ಕೂ ಸಿದ್ದರಾಮಯ್ಯ ಸರಕಾರ ಏನು ಮಾಡುತ್ತಿದೆ ? ಊರಿಗೆ ಬೆಂಕಿ ಬೀಳಲಿ, ಆ ಮೇಲೆ ನೋಡುವ ಎಂದು ಕಾದು ಕೂತಿದೆಯೆ ? ಎಂದು ಮುನೀರ್ ಕಾಟಿಪಳ್ಳ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News