ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ
Update: 2023-10-03 15:30 GMT
ಮಂಗಳೂರು : ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿದ ಆರೋಪದ ಮೇರೆಗೆ ಇಬ್ಬರನ್ನು ಬರ್ಕೆ ಮತ್ತು ಕದ್ರಿ ಪೊಲೀಸರು ಸೋಮವಾರ ಪ್ರತ್ಯೇಕ ಘಟನೆಯಲ್ಲಿ ಬಂಧಿಸಿದ್ದಾರೆ.
ನಗರದ ಭಾರತಿ ಕಾಂಪೌಂಡ್‌ನ ರೋಶನ್ (18) ಮತ್ತು ಕುರ್ನಾಡಿನ ಅವಿನಾಶ್ ಎಚ್(26) ಬಂಧಿತ ಆರೋಪಿಗಳಾಗಿ ದ್ದಾರೆ. ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.