ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್ ಸಹಚಾರಿ ರಿಲೀಫ್ ಸೆಂಟರ್ ಉದ್ಘಾಟನೆ

Update: 2024-03-03 05:30 GMT

ದೇರಳಕಟ್ಟೆ, ಮಾ.3: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ 'ಸಹಚಾರಿ ರಿಲೀಫ್ ಸೆಂಟರ್' ಉದ್ಘಾಟನೆ ಹಾಗೂ ಮೀಡಿಯಾ ವಿಂಗ್ ಲೋಗೋ ಬಿಡುಗಡೆ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಕೋಶಾಧಿಕಾರಿ ಹಾಗೂ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ನೆರವೇರಿಸಿದರು,

ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಫೈಝಲ್ ಡಿ.ಎಂ. ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಸದಸ್ಯರಾದ ಅಬೂಬಕರ್ ರಿಯಾಝ್ ರಹ್ಮಾನಿ ಸಹಚಾರಿ ರಿಲೀಫ್ ಸೆಂಟರ್ ಕುರಿತು ಮಾತನಾಡಿದರು,

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ನಿರ್ದೇಶಕ ಹಾಜಿ ಅಬ್ದುರ್ರಹ್ಮಾನ್ ಪನೀರ್, ಮುಹಮ್ಮದ್ ನಡುಪದವು, ಬದ್ರಿಯಾ ಜುಮಾ ಮಸೀದಿ ಮುಅಝಿನ್ ಉಬೈದ್ ಮುಸ್ಲಿಯಾರ್, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಕೋಶಾಧಿಕಾರಿ ಎಂ.ಎಚ್.ಹಸನ್ ಬಾವು, ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ಕೋಶಾಧಿಕಾರಿ ಹಾಜಿ ಅಬೂಬಕರ್ ಸ್ವಾಗತ್, ಉಪಾಧ್ಯಕ್ಷ ಮುಹಮ್ಮದ್ ಪನೀರ್, ಎಸ್.ವೈ.ಎಸ್. ದೇರಕಳಟ್ಟೆ ಅಧ್ಯಕ್ಷ ಸಯ್ಯದ್ ಅಲಿ, ಇಸ್ಹಾಕ್ ಏಶ್ಯನ್, ಬೆಳ್ಮ ಗ್ರಾಪಂ ಸದಸ್ಯ ಇಕ್ಬಾಲ್ ಎಚ್.ಆರ್., ಇಬ್ರಾಹೀಂ ಬದ್ಯಾರ್, ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತೈಬ ಪ್ರಧಾನ ಕಾರ್ಯದರ್ಶಿ ಅಹ್ಮದ್ ಸಿರಾಜ್ ತಾಜ್, ಬದ್ಯಾರ್ ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಜಮಾಅತ್ ಹಿರಿಯ ಸದಸ್ಯರಾದ ಹಾಜಿ ಅಹ್ಮದ್ ಬಾವಾ ಏಶ್ಯನ್, ಹಾಜಿ ಅಬ್ದುರ್ರಹ್ಮಾನ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಜೆ., ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್, ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯ ನಾಸಿರ್ ಡಿ., ಜಲಾಲ್ ಬಾಗ್ ಯೂತ್ ಫ್ರೆಂಡ್ಸ್ ಅಧ್ಯಕ್ಷ ಹಸನ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಮಾತನಾಡಿ ಶುಭ ಹಾರೈಸಿದರು.

ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿದರು. ವರ್ಕಿಂಗ್ ಕಾರ್ಯದರ್ಶಿ ಮುಝಮ್ಮಿಲ್ ಎಚ್.ಆರ್. ವಂದಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News