ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚದಿಂದ ಪ್ರತಿಭಟನೆ

Update: 2024-07-05 16:05 GMT

ಉಳ್ಳಾಲ: ಕಾಂಗ್ರೆಸ್ ಮಹಿಳೆಯರಿಗೆ ಉಚಿತ ಭಾಗ್ಯಗಳ ಅಮಿಷ ಒಡ್ಡಿ, ಮರುಳು ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೇರಿದ್ದು ಈಗ ದಿನ ಬಳಕೆಯ ಪ್ರತಿಯೊಂದು ಅಗತ್ಯ ವಸ್ತುಗಳಿಗೂ ಬೆಲೆಯೇರಿಸಿದ್ದು ಕಾಂಗ್ರೆಸ್ಗೆ ಮತ ಚಲಾಯಿಸಿದ ಮತದಾರರು ಪಶ್ಚತ್ತಾಪ ಪಡುವಂತೆ ಮಾಡಿದೆ ಎಂದು ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಧನಲಕ್ಷ್ಮೀ ಗಟ್ಟಿ ಹೇಳಿದರು.

ಬಿ.ಜೆ.ಪಿ. ಮಹಿಳಾ ಮೋರ್ಚಾ,ಮಂಗಳೂರು ಮಂಡಲದ ವತಿಯಿಂದ ಹಾಲಿನ ದರವನ್ನು ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಕ್ಕೊಟು ಫೈಓವರ್ ಕೆಳಗಡೆ ಶುಕ್ರವಾರದಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ, ಬಾಲವನ ನಿಗಮದ ಮಾಜಿ ಅಧ್ಯಕ್ಷೆ ಸುಲೋಚನ ಜಿ.ಕೆ.ಭಟ್, ಬಿಜೆಪಿ ಮಂಗಳೂರು ಮಂಡಲದ ಪ್ರಭಾರ ಅಧ್ಯಕ್ಷರಾದ ಹೇಮಂತ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರ್, ರಾಜ್ಯ ಮೀನುಗಾರರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾದ ಯಶವಂತ ಅಮೀನ್,ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಕಮಲಾಕ್ಷಿ, ಪ್ರಧಾನ ಕಾರ್ಯದರ್ಶಿ ಲಿಖಿತಾ ಆರ್.ಶೆಟ್ಟಿ,ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ,ಜಿಲ್ಲಾ ಸಮಿತಿ ಸದಸ್ಯರಾದ ಲಲಿತಾ ಸುಂದರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು, ಸುಜಿತ್ ಮಾಡೂರು, ಉಪಾಧ್ಯಕ್ಷರುಗಳಾದ ಮನೋಜ್ ಆಚಾರ್ಯ, ರವಿಶಂಕರ್ ಸೋಮೇಶ್ವರ,ಯಶವಂತ ದೇರಾಜೆ,ಮಹಿಳಾ ಮೋರ್ಚಾ ಪ್ರಭಾರಿ ಸುಮನಾ ಹರೀಶ್ ಶೆಟ್ಟಿ,ಕಾರ್ಯದರ್ಶಿಗಳಾದ ಜೀವನ್ ಕುಮಾರ್ ತೊಕ್ಕೊಟ್ಟು, ರಮೇಶ್ ಬೆದ್ರೊಳಿಕೆ, ರಾಜೇಶ್ ಉಳ್ಳಾಲ, ಒಬಿಸಿ ಮೋರ್ಚಾದ ಅಧ್ಯಕ್ಷರಾದ ಗಣೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಗಳಾದ ಶೇಖರ್ ಕನೀರ್ ತೋಟ, ಗಣೇಶ್ ಕಾಪಿಕಾಡ್, ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಮುರಳಿ ಕೊಣಾಜೆ, ಪ್ರಧಾನ ಕಾರ್ಯದರ್ಶಿಗಳಾದ ಲವೀಶ್ ಶೆಟ್ಟಿ ಪಿಲಾರ್,ದೀಕ್ಷಿತ್ ಕಾಪಿಕಾಡ್,ಎಸ್.ಸಿ.ಮೋರ್ಚಾದ ಅಧ್ಯಕ್ಷರಾದ ವರುಣ್ ತಲಪಾಡಿ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಕರೀಮ್ ಉಚ್ಚಿಲ, ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಸಪ್ನಾ ಶೆಟ್ಟಿ,ಶಾರದ ಚೌಟ, ಹೇಮಲತಾ ಭಂಡಾರಿ, ದಿವ್ಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಾಧವಿ ಉಳ್ಳಾಲ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿಗಳಾದ ಸುಮಲತಾ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು, ಹರಿಣಾಕ್ಷಿ ಕೊಲ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News