ಸಿಪಿಎಂ ಮುಡಿಪು ವಲಯ ಸಮ್ಮೇಳನ

Update: 2024-10-06 16:27 GMT

ಮಂಗಳೂರು, ಅ.6: ಸಿಪಿಎಂ ಮುಡಿಪು ವಲಯ ಸಂಘಟನಾ ಸಮಿತಿಯ ಪ್ರಥಮ ಸಮ್ಮೇಳನವು ಹರೇಕಳದ ಕಾಮಣ್ಣ ರೈ ಸ್ಮಾರಕ ಭವನದಲ್ಲಿ ನಡೆಯಿತು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪಕೊಂಚಾಡಿ ಕಮ್ಯುನಿಸ್ಟ್ ಪಕ್ಷ ಮತ ಆಧಾರದಲ್ಲಿ ಹಿನ್ನಡೆಯಾಗಿದ್ದರೂ ಚಳುವಳಿ, ಹೋರಾಟ, ಕಾರ್ಮಿಕರ ಪರವಾಗಿ ಯಾವಾಗಲೂ ಮುಂದೆಯೇ ಇರುತ್ತದೆ. ಕಮ್ಯುನಿಸ್ಟ್ ಪಕ್ಷ ಎಲ್ಲಿದೆ ಎಂದು ಕೇಳಿದವರಿಗೆ ನೆರೆಯ ಶ್ರೀಲಂಕಾ ದೇಶ ಸಾಕ್ಷಿಯಾಗಿ ನಿಂತಿದೆ ಎಂದರು.

ಹಿರಿಯ ಸಂಗಾತಿ ಯು.ಬಿ. ಲೋಕಯ್ಯ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ರಫೀಕ್ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಪದ್ಮಾವತಿ ಶೆಟ್ಟಿ,ಸಿಪಿಎಂ ಮುಡಿಪು ವಲಯ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು, ಹರೇಕಳ ಗ್ರಾಪಂ ಸದಸ್ಯ ಅಶ್ರಫ್ ಹರೇಕಳ ಉಪಸ್ಥಿತರಿದ್ದರು.

ಪ್ರತಿನಿಧಿ ಅಧಿವೇಶನದಲ್ಲಿ ಮುಡಿಪು ವಲಯ ನೂತನ ಸಮಿತಿಯನ್ನು ರಚಿಸಲಾಯಿತು. ಸಿಪಿಎಂ ಮುಡಿಪು ವಲಯ ನೂತನ ಕಾರ್ಯದರ್ಶಿಯಾಗಿ ರಫೀಕ್ ಹರೇಕಳ, ಸದಸ್ಯರಾಗಿ ರಿಝ್ವಾನ್ ಹರೇಕಳ, ಅಶ್ರಫ್ ಹರೇಕಳ, ರಝಾಕ್ ಮುಡಿಪು, ರಝಾಕ್ ಮೊಂಟೆಪದವು, ಶಾಫಿ ಮುಡಿಪು, ರಾಮಚಂದ್ರ ಫಜೀರ್ ಆಯ್ಕೆಯಾದರು.

ಮುಡಿಪು ಪ್ರದೇಶದಲ್ಲಿರುವ ಎಲ್ಲಾ ನಿವೇಶನ ರಹಿತರನ್ನು ಒಗ್ಗೂಡಿಸಿ ಹೋರಾಟ ಮಾಡಲಾಗುವುದು ಮತ್ತು ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳನ್ನು ಉಳಿಸಲು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಸಮ್ಮೇಳನದಲ್ಲಿ ನಿರ್ಣಯಿಸ ಲಾಯಿತು.. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಸಮಾರೋಪ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News