ಮುದುಂಗರ ಕಟ್ಟೆ ಸರಕಾರಿ ಶಾಲೆಯಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ

Update: 2024-10-06 14:08 GMT

ಮಂಗಳೂರು: ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ , ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಆಚರಣೆ ಬಾಳೆಪುಣಿಯ ಮುದುಂಗರ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಯೆನೆಪೋಯ ಪರಿಗಣಿತ ವಿವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾರತ ಸರಕಾರದ ಉಪಕಾರ್ಯದರ್ಶಿ ಎಸ್.ಕೆ. ಪಾಂಡೆ, ಪ್ರಾದೇಶಿಕ ನಿರ್ದೇಶಕ ಕಾರ್ತಿಗೀನ್ ಭಾಗವಹಿಸಿದ್ದರು, ಬಾಳೆಪುಣಿ ಗ್ರಾ.ಪಂ.ಅಧ್ಯಕ್ಷೆ ಸುಕನ್ಯಾ ರೈ, ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಹಮದ್ ಬಶೀರ್, ಬಾಳೆಪುಣಿ ಗ್ರಾ.ಪಂ.ಪಿಡಿಒ ವೆಂಕಟೇಶ್ ಮತ್ತು ವೈಪಿಸಿಆರ್‌ಸಿ ಡಾ. ವೈಎಚ್‌ಎಂಸಿಎಚ್‌ನ ಡೀನ್ ಶಿವಪ್ರಸಾದ್ ಕೆ, ವೈಪಿಸಿಆರ್‌ಸಿ ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿ ಅಬ್ದುಲ್ ರಹಮಾನುಲ್ಲಾ, , ಸಂಘಟನಾ ಅಧ್ಯಕ್ಷ ಡಾ. ಶಶಿಕಾಂತ್ ಕಮ್ಮಾರ್, ಸಂಘಟನಾ ಕಾರ್ಯದರ್ಶಿ ಡಾ. ದರ್ಶನ್ ಜೆ, ಶಾಲೆಯ ಮುಖ್ಯೋಪಾಧ್ಯಾಯಿನಿ ಪುಟ್ಟಮ್ಮ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಮಹಮ್ಮದ್ ಗುಲ್ಜಾರ್ ಅಹಮದ್‌ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News