ಮಂಗಳೂರು ದಸರಾ ಮ್ಯಾರಾಥಾನ್

Update: 2024-10-06 11:37 GMT

ಮಂಗಳೂರು, ಅ.6: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾದ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ರವಿವಾರ ನಡೆದ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್-2024 ಸ್ಪರ್ಧೆಯು ಮನಸೂರೆಗೊಂಡಿತು.

ಮುಂಜಾನೆಯ ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ಸೇರಿದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಮ್ಯಾರಾಥಾನ್‌ನ್ನು ಯಶಸ್ಸುಗೊಳಿಸಿದರು.

ವನ್ ಸಿಟಿ-ವನ್ ಸ್ಪಿರಿಟ್ ಧ್ಯೇಯದೊಂದಿಗೆ ದ.ಕ.ಜಿಲ್ಲೆಯನ್ನು ವ್ಯಸನಮುಕ್ತವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸ್ಪರ್ಧೆ ಯಲ್ಲಿ ಚಿಣ್ಣರಿಂದ ವೃದ್ಧರವರೆಗಿನ ಜನರು ಭಾಗವಹಿಸುವ ಮೂಲಕ ವಿಶೇಷ ಮೆರಗು ನೀಡಿದರು. ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು.

21 ಕಿಮೀ, 10 ಕಿಮೀ ಸ್ಪರ್ಧೆ ಮತ್ತು 5 ಕಿಮೀ ಫನ್ ರನ್ ನಡೆಯಿತು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗ ಗಳಲ್ಲಿ ಸ್ಪರ್ಧೆ ಆಯೋಜಿಸಲಾಯಿತು. 21 ಕಿಮೀ. ಪ್ರಥಮ ವಿಜೇತರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ 10 ಸಾವಿರ ರೂ., 10 ಕಿಮೀ. ಹಾಫ್ ಮ್ಯಾರಥಾನ್‌ಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಯಿತು.

*ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿ ಸಂತೋಷ್ ಜೆ.ಪೂಜಾರಿ, ಕುದ್ರೋಳಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ದ.ಕ. ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಜೂಯಿಸ್ ಫಿಟ್ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ, ಕಬಡ್ಡಿ ಪಟು ರವಿ ಉರ್ವ ಮತ್ತಿತರರು ಪಾಲ್ಗೊಂಡಿದ್ದರು. ಆರ್.ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿಜೇತರು

10 ಕೆ ಪುರುಷರ ವಿಭಾಗ

ಪ್ರಥಮ: ಮಂಗಳೂರಿನ ರಂಗಣ್ಣ ನಾಯ್ಕರ (33 ನಿಮಿಷ 53 ಸೆಕೆಂಡ್),

ದ್ವಿತೀಯ: ಬೆಂಗಳೂರಿನ ಶ್ರೀಧರ ಎಸ್.ಎನ್(33.55)

ತೃತೀಯ: ಬೆಂಗಳೂರಿನ ಗೋವಿಂದರಾಜ ಎಚ್. (35.15)

10 ಕೆ ಮಹಿಳಾ ವಿಭಾಗ

ಪ್ರಥಮ: ಬೆಂಗಳೂರಿನ ಸ್ಮಿತಾ ಡಿ.ಆರ್.(41.09)

ದ್ವಿತೀಯ: ಮೈಸೂರಿನ ಉಷಾ ಆರ್. (42.01)

ತೃತೀಯ: ಮೈಸೂರಿನ ಪ್ರೀಯಾಂಕಾ ಮಾರುತಿ(44.48)

22ಕೆ ಪುರುಷರ ವಿಭಾಗ

ಪ್ರಥಮ: ಬೆಳಗಾಂನ ಶಿವಾನಂದ ಚಿಗರಿ (1ಗಂಟೆ 12ನಿಮಿಷ 07 ಸೆಕೆಂಡ್)

ದ್ವಿತೀಯ: ಹಾವೇರಿಯ ಪುರುಷೋತ್ತಮ ಆರ್. (1.13.28),

ತೃತೀಯ: ಮೈಸೂರಿನ ಸಚಿನ್ ನಂದು (1.14.13)

22ಕೆ ಮಹಿಳಾ ವಿಭಾಗ

ಪ್ರಥಮ: ಕೇರಳದ ಆಶಾ ಟಿ.ಪಿ (1.30.20)

ದ್ವಿತೀಯ: ಬೆಂಗಳೂರಿನ ಪ್ರಿಯಾಂಕಾ ಸಿ. (1.35.18)

ತೃತೀಯ: ಮೈಸೂರಿನ ಅರ್ಚನಾ ಕೆ.ಎಂ(1.36.14)

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News