ಕರಾಯ: ಅಲ್ ಬಿರ್ರ್ ಸ್ಕೂಲಿನಲ್ಲಿ ಇಶ್ಕೇ ರಸೂಲ್ ಮೀಲಾದ್ ಕಾರ್ಯಕ್ರಮ

Update: 2024-10-06 08:05 GMT

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯದ ಅಲ್ ಬಿರ್ರ್ ಶಾಲೆಯಲ್ಲಿ ಮೀಲಾದ್ ಪ್ರಯುಕ್ತ ಮೌಲಿದ್ ಮಜ್ಲಿಸ್ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾ ಪ್ರದರ್ಶನ, ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು.

  ಸಭಾ ಕಾರ್ಯಕ್ರಮವನ್ನು ಹಬೀಬುರ್ರಹ್ಮಾನ್ ತಂಙಳ್ ಕಲ್ಲೇರಿ ದುಆ ಮೂಲಕ ಉದ್ಘಾಟಿಸಿದರು.

ಮುಖ್ಯ ಭಾಷಣಗೈದ ಎಸ್‌ಬಿ ದಾರಿಮಿ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ದೈನಂದಿನ ಬದಲಾವಣೆಗಳು ಆಗುತ್ತಿರುವಾಗ ಕಾಲದ ಕರೆಗೆ ಓಗೊಟ್ಟು ಮೂಲ ಧರ್ಮದ ಆಶಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿ ಕೊಳ್ಳದಿದ್ದರೆ ಸಮುದಾಯ ಹಿಂದುಳಿಯ ಬೇಕಾಗುತ್ತದೆ ಎಂದರು.

ಮಹಮ್ಮದ್ ಅಶ್ರಫ್ ಉರುವಾಲು ಪದವು ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಶುಕೂರ್ ದಾರಿಮಿ ಸ್ವಾಗತಿಸಿದರು.

ಸಮಾರಂಭದಲ್ಲಿಸಯ್ಯಿದ್ ಅನಸ್ ತಂಙಳ್ ಕರ್ವೇಲು,  ಸಯ್ಯಿದ್ ಹಬೀಬುರ್ರಹ್ಮಾನ್ ತಙಳ್, ಇಸ್ಮಾಯಿಲ್ ತಙಳ್ ಉಪ್ಪಿನಂಗಡಿ, ಶಿಹಾಬುದ್ದೀನ್ ತಙಳ್, ಖಾಸಿಂ ಮದನಿ ಕರಾಯ, ಸಿದ್ದೀಕ್ ಫೈಝಿ,  ಅಝೀಝ್ ಫೈಝಿ, ಯಾಕೂಬ್ ಫೈಝಿ, ಅಬ್ದುಲ್ ಜಬ್ಬಾರ್ ಅಸ್ಲಮಿ, ಇಲ್ಯಾಸ್ ಅರ್ಷದಿ ಆತೂರು,  ಅಬ್ದುಲ್ ನಾಸಿರ್ ಅನ್ಸಾರಿ, ಇಲ್ಯಾಸ್ ದಾರಿಮಿ, ಅಶ್ರಫ್ ಹನೀಫಿ, ಜಬ್ಬಾರ್ ಅಶ್ಶಾಫಿ, ಸೇಕುಞಿ ಕಡಂಬಿಲ, ಮುಹಮ್ಮದ್ ಕೋಟ್ರಸ್, ಅಬ್ದುಲ್ಲಾ ಕೆ ಎಂ, ಅಶ್ರಫ್ ಕೊಲ್ಲೆಜಾಲು, ಯುಟಿ ಫಯಾಜ್ ಉಪ್ಪಿನಂಗಡಿ, ಯೂಸುಫ್ ಹಾಜಿ ಪೆದಮಲೆ, ಯಾಕೂಬ್ ಹುಸೈನ್ ಅಗ್ನಾಡಿ, ಕಾಸಿಂ ಕೊರಿಂಜ, ಅಬ್ಬಾಸ್ ಹಾಜಿ ಮುರಿಯಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News