ಗುರುಪುರ ಬಂಟರ ಸಂಘಕ್ಕೆ ಸಮಗ್ರ ಪ್ರಶಸ್ತಿ

Update: 2024-10-05 15:52 GMT

ಮಂಗಳೂರು, ಅ.5: ಬಂಟರ ಯಾನೆ ನಾಡವರ ಮಾತೃಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್‌ಹಾಸ್ಟೆಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಬಂಟ ಕ್ರೀಡೋತ್ಸವ-2024 ರಲ್ಲಿ ಗುರುಪುರ ಬಂಟರ ಮಾತೃ ಸಂಘಕ್ಕೆ ಸಮಗ್ರ ಪ್ರಶಸ್ತಿ ದೊರಕಿದೆ.

ತ್ರೋಬಾಲ್ ಸ್ಪರ್ಧೆಯಲ್ಲಿ ಕಾರ್ಕಳ ಮಹಿಳಾ ಬಂಟರ ಸಂಘ ಪ್ರಥಮ ಹಾಗೂ ಪುತ್ತೂರು ಬಂಟರ ಸಂಘ ದ್ವಿತೀಯ ಬಹುಮಾನ ಪಡೆಯಿತು.

ಪುರುಷರ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಕಾವೂರು ಬಂಟರ ಸಂಘ ಪ್ರಥಮ, ಸುರತ್ಕಲ್ ಬಂಟರ ಸಂಘ ಬಿ ದ್ವಿತೀಯ, ಮಹಿಳೆಯರ ಶೂಟ್‌ಔಟ್‌ನಲ್ಲಿ ಬಜ್ಪೆಬಂಟರ ಸಂಘ ಬಿ ಪ್ರಥಮ ಹಾಗೂ ಬಜ್ಪೆಬಂಟರ ಸಂಘ ಎ ದ್ವಿತೀಯ ಸ್ಥಾನಿಯಾಯಿತು.

ಹಗ್ಗ ಎಳೆಯುವ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಮಂಜೇಶ್ವರ ಬಂಟರ ಸಂಘ ಪ್ರಥಮ, ಪುತ್ತೂರು ಬಂಟರ ಸಂಘ ದ್ವಿತೀಯ ಹಾಗೂ ಬಂಟ್ವಾಳ ಬಂಟರ ಸಂಘ ತೃತೀಯ ಬಹುಮಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಸುರತ್ಕಲ್ ಬಂಟರ ಸಂಘ ಬಿ ಪ್ರಥಮ, ಸುರತ್ಕಲ್ ಬಂಟರ ಸಂಘ ಎ ದ್ವಿತೀಯ ಹಾಗೂ ಬಂಟ್ವಾಳ ಬಂಟರ ಸಂಘ ತೃತೀಯ ಬಹುಮಾನ ಗಳಿಸಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಬಹುಮಾನ ವಿತರಿಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ ಮೋಹನ್ ರೈ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಶೆಡ್ಡೆ ಮಂಜುನಾಥ್ ಭಂಡಾರಿ, ಕೃಷ್ಣ ಪ್ರಸಾದ್ ರೈ, ತಾಲೂಕು ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ, ಗಣೇಶೋತ್ಸವ ಸಮಿತಿಯ ಸಂಚಾಲಕರಾದ ದಿವಾಕರ ಸಾಮಾನಿ, ಅಶ್ವತ್ತಾಮ ಹೆಗ್ಡೆ, ಮನೀಶ್ ರೈ, ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು.

ಈ ಸಂದರ್ಭ ನೆಟ್ಬಾಲ್ ಪಟು ಮೌಲ್ಯ ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕೂಟದ ಸಂಚಾಲಕ ಕಿರಣ್ ಪಕ್ಕಳ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕಿ ನಿವೇದಿತಾ ಎನ್.ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News