ಸಮಸ್ತ ಪ್ರಾರ್ಥನಾ ದಿನ | ಮೂಡಬಿದಿರೆ ರೇಂಜ್ ವ್ಯಾಪ್ತಿಯ ಮದ್ರಸಗಳಲ್ಲಿ ರವಿವಾರ ಪ್ರಾರ್ಥನಾ ಸಂಗಮ

Update: 2024-10-05 17:52 GMT

ಮೂಡಬಿದಿರೆ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಅ.6 ರಂದು ರವಿವಾರ ವಿಜೃಂಭಣೆಯ ಪ್ರಾರ್ಥನಾ ಸಂಗಮ ನಡೆಯಲಿದೆ.

ಹಿಜಿರಾ ವರ್ಷದ ರಬೀವುಲ್ ಆಖರ್ ತಿಂಗಳ ಮೊದಲ ರವಿವಾರ ಪ್ರತಿ ವರ್ಷವೂ ಈ ಕಾರ್ಯಕ್ರಮ ನಡೆಸಲು ಸಮಸ್ತ ವಿದ್ಯಾಭ್ಯಾಸ ಮಂಡಳಿಯು ಸುತ್ತೋಲೆ ಹೊರಡಿಸಿದ್ದು, ದೇಶ ವಿದೇಶಗಳಲ್ಲಿರುವ ಸಮಸ್ತದ ಎಲ್ಲಾ ಅಂಗೀಕೃತ 10923 ಮದ್ರಸಗಳಲ್ಲಿ ಅಕ್ಟೋಬರ್ 06 ರವಿವಾರ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಗಲಿದ ಸಮಸ್ತ ಉಲಮಾಗಳು, ಪ್ರಾದೇಶಿಕ ಉಮರಾಗಳ ಅನುಸ್ಮರಣೆ ಮತ್ತು ಪ್ರಾರ್ಥನಾ ಸಭೆ ನಡೆಯಲಿದೆ.

ಸಮಸ್ತದ ಪೂರ್ವಕಾಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಮರ್ಹೂಂ ಶೈಖುನಾ ಶಂಸುಲ್ ಉಲಮಾ ಈ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅವರ ತೀರ್ಮಾನದಂತೆ ವಿದ್ಯಾಭ್ಯಾಸ ಮಂಡಳಿಯ ನಾಯಕರೆಲ್ಲರೂ ಸಮ್ಮತಿ ನೀಡಿ ಈ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪ್ರಾರ್ಥನಾ ಸಂಗಮವು ಸುಸೂತ್ರವಾಗಿ ನಡೆಸಿಕೊಂಡು ಬರಲು ರೇಂಜ್ ಪದಾಧಿಕಾರಿಗಳಿಗೂ, ಮದ್ರಸಾ ನಿಯಂತ್ರಣ ಮಂಡಳಿಗೂ ಸಮಸ್ತ ವಿದ್ಯಾಭ್ಯಾಸ ಮಂಡಳಿಯು ಅವಕಾಶ ಕಲ್ಪಿಸಿದೆ.

ಮೂಡಬಿದಿರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವ್ಯಾಪ್ತಿಯಲ್ಲಿನ ಸಮಸ್ತದ ಎಲ್ಲಾ ಅಂಗೀಕೃತ ಮದ್ರಸಗಳಲ್ಲಿ ರವಿವಾರ ಪ್ರಾರ್ಥನಾ ಸಂಗಮ ನಡೆಯಲಿದ್ದು, ಮಸೀದಿ ಪದಾಧಿಕಾರಿಗಳು, ಮದ್ರಸಾ ನಿಯಂತ್ರಣ ಮಂಡಳಿಯ ಸದಸ್ಯರು ಸೇರಿದಂತೆ ಊರಿನ ಪ್ರಮುಖರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೂಡಬಿದಿರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅಕ್ರಂ ಅಲಿ ತಂಙಳ್ ಅಂಗರಕರ್ಯ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ದಾರಿಮಿ, ಐ.ಟಿ. ಕೋರ್ಡಿನೇಟರ್ ಸಫ್ವಾನ್ ಬಾಖವಿ ಮಾಪಾಲ್, ಕೋಶಾಧಿಕಾರಿ ಅಬ್ಬುವಾಕ ಮೂಡುಬಿದಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News