ಅ.7: ಗುಂಡುಕಲ್ಲು ಮಸೀದಿ ಸಮಿತಿಗೆ ಚುನಾವಣೆ

Update: 2024-10-05 15:55 GMT

ಮಂಗಳೂರು, ಅ.5: ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಮೊಹಿಯುದ್ದೀನ್ ಜುಮಾ ಮಸ್ಜಿದ್ ಸಮಿತಿಗೆ ಆ.7ರಂದು ಚುನಾವಣೆ ನಡೆಯಲಿದೆ.

ಸೆ.29ರಂದು ನಡೆಯಬೇಕಿದ್ದ ಚುನಾವಣೆಯು ಕೆಲವು ತಾಂತ್ರಿಕ ಕಾರಣಗಳಿಂದ ರಾಜ್ಯ ಹೈಕೋರ್ಟ್‌ನ ಆದೇಶದಂತೆ ಮುಂದೂಡಲಾಗಿತ್ತು. ಇದೀಗ ಮುಂದೂಡಲ್ಪಟ್ಟ ಈ ಚುನಾವಣೆಯನ್ನು ಅ.7ರಂದು ಪೂ.11ರಿಂದ ಅಪರಾಹ್ನ 3ರವರೆಗೆ ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಮದ್ರಸದ ಕಟ್ಟಡದಲ್ಲಿ ನಡೆಸಲಾಗುವುದು ಎಂದು ಮಸೀದಿಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ವಕ್ಫ್ ಕಚೇರಿಯ ಲೆಕ್ಕಪರಿಶೋಧಕ ಅನ್ವರ್ ಮುಸ್ತಾಫ್ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News