ಗುಲಾಮ್ ಕುಟುಂಬದ ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ, ಸುರಕ್ಷತೆಗೆ ಪ್ರೋತ್ಸಾಹ: ಬ್ಲೂಲೈನ್ ಫೌಂಡೇಶನ್

Update: 2024-10-05 16:39 GMT

ಮಂಗಳೂರು: ಕುಟುಂಬ ಸಂಬಂಧ ದೂರವಾಗುತ್ತಿರುವುದು, ಕುಟುಂಬದ ಸದಸ್ಯರ ಪರಿಚಯ ಇಲ್ಲದೇ ನವ ಪೀಳಿಗೆ ಬೆಳೆಯುವುದು, ಪರಸ್ಪರ ಸಹಕಾರ ಮತ್ತು ಕಾಳಜಿಯು ಕಡಿಮೆ ಆಗುತ್ತಿರುವ ಕಾಲಘಟ್ಟದಲ್ಲಿ ಕುಟುಂಬ ಸಮ್ಮಿಲನ ಬಹಳ ಅಗತ್ಯವಾಗಿದೆ ಎಂದು ಬ್ಲೂಲೈನ್ ಇಂಡಸ್ಟ್ರೀಸ್ ನ ಮಾಲಕರಾದ ಸೌಕತ್ ಶೌರಿ ಅಭಿಪ್ರಾಯಪಟ್ಟರು.

ಪ್ರತಿಷ್ಠಿತ ಗುಲಾಮ್ ಫ್ಯಾಮಿಲಿಯ ಅಸ್ಮಿತೆಯಾಗಿದ್ದ ತಂದೆಯವರ ಮರಣ ನಂತರ ಈ ಕುಟುಂಬವನ್ನು ಸಹಭಾಗಿಗಳಾಗಿ ಕೊಂಡು ಹೋಗುವ ಜವಾಬ್ದಾರಿಯನ್ನು ನಾನು ಮತ್ತು ನನ್ನ ಸಹೋದರರು ವಹಿಸಿದ್ದೇವೆ ಎಂದ ಅವರು, ತಮ್ಮ ತಂದೆ ಉದ್ಯಮಿ ಮರ್ಹೂಂ ಅನ್ವರ್ ಹುಸೈನ್ ರನ್ನು ಸ್ಮರಿಸಿದರು.


ಇಸ್ಲಾಮಿನ ಪ್ರಕಾರ ಕಾರುಣ್ಯ ಸೇವೆ, ಕಾಳಜಿಯ ಸಹಯೋಗವನ್ನು ಮೊದಲು ಕುಟುಂಬಕ್ಕೆ ನಂತರ ಊರಿನವರಿಗೆ ಮಾಡಬೇಕು ಎಂಬ ಉದಾತ್ತ ಸಂದೇಶವನ್ನು ಪಾಲಿಸುವ ವ್ಯಕ್ತಿ ನಾನು, ನಮ್ಮ ಬ್ಲೂಲೈನ್ ಇಂಡಸ್ಟ್ರೀಸ್ ಮೂಲಕ ಸಹೋದರರು ಮತ್ತು ನಮ್ಮ ಮನೆಯ ಸದಸ್ಯರ ಮೂಲಕ ಗುಲಾಮ್ ಕುಟುಂಬದ ಶೈಕ್ಷಣಿಕ ಅಭಿವೃದ್ಧಿ ಮತ್ತು ಆರೋಗ್ಯ ಕಾಳಜಿಗೆ ಬೇಕಾದ ಸೌಲಭ್ಯವನ್ನು ಬ್ಲೂಲೈನ್ ಫೌಂಡೇಶನ್ ಮೂಲಕ ನಿರ್ವಹಿಸುವುದಾಗಿ ಸೌಕತ್ ಶೌರಿ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.


ಸುಮಾರು 850 ಕ್ಕಿಂತ ಹೆಚ್ಚು ಸದಸ್ಯರು ಭಾಗವಹಿಸಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಟುಂಬದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲಾ ಸೌಲಭ್ಯ ಮತ್ತು ಪ್ರೋತ್ಸಾಹಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪುತ್ತೂರು ಕಮ್ಯೂನಿಟಿ ಸೆಂಟರಿಗೆ ನೀಡಲಾಯಿತು. ಇದಕ್ಕೆ ಬೇಕಾದ ಅನುಕೂಲತೆಯನ್ನು ಬ್ಲೂಲೈನ್ ಫೌಂಡೇಶನ್ ನೀಡಲಿದೆ. ಆರೋಗ್ಯ ವಿಭಾಗದಲ್ಲಿ ಹಲವು ವೈವಿಧ್ಯಮಯ ಯೋಜನೆಯನ್ನು ಜಾರಿಗೊಳಿಸಲು ಸಂಸ್ಥೆ ನಿರ್ಧರಿಸಿತು. ಕುಟುಂಬ ಕಲ್ಯಾಣ ಯೋಜನೆಯ ಭಾಗವಾಗಿ ನಿರಂತರ ಸಂವಹನ ಮತ್ತು ಸಹಯೋಗ ರೂಪಿಸಿದ ಬ್ಲೂಲೈನ್ ಫೌಂಡೇಶನ್, ಅದರ ನಿರ್ವಹಣೆಗೆ ಕುಟುಂಬದ ಕೆಲವು ಕ್ರಿಯಾಶೀಲ ವ್ಯಕ್ತಿಗಳಿಗೆ ಜವಾಬ್ದಾರಿ ನೀಡಲಾಯಿತು.










Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News