ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಸೆರೆ

Update: 2024-10-10 16:17 GMT

ಮಂಗಳೂರು, ಅ.10: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ತಲಪಾಡಿ ಗ್ರಾಮದ ನಾರ್ಲ ಪಡೀಲ್‌ನ ಕಿರಣ್ ಡಿಸೋಜ (25) ಎಂಬಾತನನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್ ತಂಡವು ಗುರುವಾರ ತಲಪಾಡಿ ಬಳಿ ಬಂಧಿಸಿದೆ.

ಆರೋಪಿಯಿಂದ ನಿಷೇಧಿತ ಮಾದಕ ವಸ್ತು 10 ಗ್ರಾಂ ತೂಕದ ಎಂಡಿಎಂಎಯನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 30 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಮತ್ತು ಮೊಬೈಲ್ ಫೋನನ್ನು ವಶಕ್ಕೆ ಪಡೆಯ ಲಾಗಿದೆ. ಇದರ ಮೌಲ್ಯ 65,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಚರಣೆಯಲ್ಲಿ ಉಳ್ಳಾಲ ಠಾಣೆಯ ನಿರೀಕ್ಷಕ ಬಾಲಕೃಷ್ಣ ಹೆಚ್‌ಎನ್, ಎಸ್ಸೈಗಳಾದ ಶೀತಲ್ ಅಲಗೂರು, ಸಂತೋಷ್ ಕುಮಾರ್ ಡಿ., ಆ್ಯಂಟಿ ಡ್ರಗ್ ತಂಡದ ಸಿಬ್ಬಂದಿ ಸಾಜು ನಾಯರ್, ಮಹೇಶ್, ಶಿವರಾಜ್, ಅಕ್ಬರ್, ತಿರುಮಲೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News