ಈಜು ಸ್ಪರ್ಧೆ: ವಾಫಿ ಅಬ್ದುಲ್ ಹಕೀಂ ಚಾಂಪಿಯನ್

Update: 2024-10-12 11:33 GMT

ಮೈಸೂರು, ಅ.12: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದಸರಾ ಕ್ರೀಡಾಕೂಟ ಸಿಎಂ ಕಪ್-2024ರ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಾಫಿ ಅಬ್ದುಲ್ ಹಕೀಂ ಚಾಂಪಿಯನ್ ಆಗಿದ್ದಾರೆ.

100 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನ , 200 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಮತ್ತು 4*100 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚು ಜಯಿಸಿದ್ದಾರೆ.

ಯೆನೆಪೊಯ ಶಾಲೆಯ ವಿದ್ಯಾರ್ಥಿಯಾಗಿರುವ ಹಕೀಂ ಅವರು ತರಬೇತುದಾರರಾದ ರಾಮಕೃಷ್ಣ , ರಾಜೇಶ್ ಮತ್ತು ಯಶೋಧ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಾರೆ. ವಾಫಿ ಕರ್ನಾಟಕವನ್ನು ವಿವಿಧ ಮಟ್ಟದಲ್ಲಿ ಪ್ರತಿನಿಧಿಸಿ, ಪದಕಗಳನ್ನು ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News