ಮುಡಿಪು: ಹಜ್ ಮಾಹಿತಿ ಕೇಂದ್ರ ಆರಂಭ

Update: 2024-10-12 11:36 GMT

ಮಂಗಳೂರು, ಅ.12: ಹಜ್ಜಾಜ್‌ಗಳಿಗೆ ಮಾಹಿತಿ ಒದಗಿಸುವ ಜಿಲ್ಲಾ ಮಾಹಿತಿ ಕೇಂದ್ರ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ಶುಕ್ರವಾರ ಆರಂಭಗೊಂಡಿದೆ.

ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸೆಯ್ಯದ್ ಅಶ್ರಫ್ ತಂಙಳ್ ಆದೂರು ಜಿಲ್ಲಾ ಹಜ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಸೆಯ್ಯದ್ ಪಾತೂರ್ ತಂಳ್, ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಹಾಜಿ, ಕೆ.ಎಂ. ಸಿದ್ದೀಕ್ ಮೊಂಟುಗೊಳಿ, ಎಸ್.ಕೆ.ಖಾದರ್ ಹಾಜಿ, ಮುಹಮ್ಮದ್ ಹಾಜಿ ಪೊಯ್ಯತ್ತಬೈಲು, ಎಂಎಂಕೆ ಸದರ್ ಮುಹಲ್ಲಿಂ, ಸಜಿಕಾರ್ ಬಶೀರ್ ಮತ್ತಿತರರರು ಉಪಸ್ಥಿತರಿದ್ದರು.

ಮುಂದಿನ ವರ್ಷ ಪವಿತ್ರ ಹಜ್ ಯಾತ್ರೆಗೆ ಆಯ್ಕೆಯಾಗಿ ಈಗಾಗಲೇ ಹಣ ಪಾವತಿಸಿದವರು ಮೆಡಿಕಲ್ ಸರ್ಟಿಫೀಕೆಟ್, ಪ್ರಥಮ ಕಂತಿನ ಹಣ ಪಾವತಿಸಿದ ರಶೀದಿ, ಫೋಟೊ , ಪಾಸ್‌ಪೋರ್ಟ್ ಜೆರಾಕ್ಸ್ , ಆಧಾರ್ ಕಾರ್ಡ್, ಅರ್ಜಿಯ ಪ್ರತಿ ಸೇರಿದಂತೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಆಪ್‌ಲೋಡ್ ಮಾಡಲಾದ ವಿವಿಧ ದಾಖಲೆ ಪತ್ರಗಳ ಪ್ರತಿಯನ್ನು ಬೆಂಗಳೂರಿನ ರಾಜ್ಯ ಹಜ್ ಕಚೇರಿಗೆ ಖುದ್ದಾಗಿ ತೆರಳಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕಾಗುತ್ತದೆ. ಇದೀಗ ದ.ಕ. ಜಿಲ್ಲೆಯಿಂದ ತೆರಳಲಿರುವ ಹಜ್ಜಾಜ್‌ಗಳ ಅನುಕೂಲಕ್ಕಾಗಿ ಮಂಗಳೂರು ಹಜ್ ಕಚೇರಿಯನ್ನು ತೆರೆಯಲಾಗಿದೆ ಹಜ್ಜಾಜ್‌ಗಳು ಅಫ್‌ಲೋಡ್ ಮಾಡಿರುವ ದಾಖಲೆಪತ್ರಗಳನ್ನು ತಲುಪಿಸಿದರೆ, ಅದನ್ನು ರಾಜ್ಯ ಹಜ್ ಸಮಿತಿಗೆ ತಲುಪಿಸ ಲಾಗುವುದು. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂಬ್ರ 9741770138ವನ್ನು ಸಂಪರ್ಕಿಸಬಹುದು ಎಂದು ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸಯ್ಯದ್ ಅಶ್ರಫ್ ತಂಙಳ್ ಆದೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News