ದೈಹಿಕ - ಮಾನಸಿಕ ಸದೃಢತೆಗೆ ಮ್ಯಾರಥಾನ್ ಪೂರಕ: ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್
ಮಂಗಳೂರು: ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಮ್ಯಾರಥಾನ್‌ನಂತಹ ಕಾರ್ಯಕ್ರಮಗಳು ಪೂರಕ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ನ. 10ರಂದು ನಡೆಯಲಿರುವ ‘ನಿವಿಯಸ್ ಮಂಗಳೂರು ಮ್ಯಾರಥಾನ್-2024’ ಪ್ರಯುಕ್ತ ಟಿ ಶರ್ಟ್ ಹಾಗೂ ಪದಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಮಾಜಿಕ ಸಂಘಟನೆಗಳು ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಮಗಂಳೂರು ಪೊಲೀಸರಿಂದ ಯಾವತ್ತೂ ಬೆಂಬಲ ಸಿಗಲಿದೆ ಎಂದು ಅವರು ಹೇಳಿದರು.
ಮಂಗಳೂರಿನ ಮಂಗಳಾ ಸ್ಟೇಡಿಯಂನಿಂದ ತಣ್ಣೀರುಬಾವಿಯವರೆಗೆ ಈ ಮ್ಯಾರಥಾನ್ ಆಯೋಜಿಸಲಾಗಿದ್ದು, ದೇಶ ವಿದೇಶದಿಂದ ಸುಮಾರು 5000 ಮಂದಿ ಈ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ರೇಸ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ತಿಳಿಸಿದ್ದಾರೆ.
ಮ್ಯಾರಥಾನ್‌ನಲ್ಲಿ ಭಾಗವಹಿಸುವರು www.mangaloremarathon.com
ಸಮಾರಂಭದಲ್ಲಿ ಮಂಗಳೂರು ರನ್ನರ್ಸ್ ಕ್ಲಬ್‌ನ ಅಧ್ಯಕ್ಷೆ ಅಮಿತಾ ಡಿಸೋಜಾ, ಕಾರ್ಯದರ್ಶಿ ಅಮರ್ ಕಾಮತ್, ಪ್ರಾಯೋಜಕರಾದ ನಿವಿಯಸ್ ಸೊಲ್ಯೂಷನ್‌ನ ಮಾರ್ಕೆಟಿಂಗ್ ಡೈರೆಕ್ಟರ್ ಅಭಿಷೇಕ್ ಹೆಗ್ಡೆ, ಎಸ್.ಎಲ್.ಶೇಟ್‌ನ ಪಾಲು ದಾರ ಪ್ರಶಾಂತ್ ಶೇಟ್, ಗೃಹಿಣಿ ಮಸಾಲದ ಮಾಲಕರಾದ ಶಿವಾನಂದ ರಾವ್ ಮತ್ತು ಶುಭಾನಂದ ರಾವ್, ಹಾಂಗ್ಯೋ ಐಸ್‌ಕ್ರೀಮ್ಸ್‌ನ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ರಾಕೇಶ್ ಕಾಮತ್, ಕಶಾರ್ಪ್ ಫಿಟ್‌ನೆಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ ಪ್ರಭು, ಕೋಸ್ಟಲ್ ಕರ್ನಾಟಕ ಟೂರಿಸಂ ಡೆವಲಪ್‌ಮೆಂಟ್ ಕೌನ್ಸಿಲ್‌ನ ಸಿಇಒ ಶರಣ್ ಶೆಟ್ಟಿ ಉಪಸ್ಥಿತರಿದ್ದರು.