ಉಳ್ಳಾಲ: ಪೇಟೆ ಮಸೀದಿಯಲ್ಲಿ ರಕ್ತದಾನ ಶಿಬಿರ

Update: 2024-10-27 13:20 GMT

ಉಳ್ಳಾಲ: ಶ್ರೇಷ್ಠ ವಾದ ಕಾರ್ಯಕ್ರಮವಾಗಿರುವ ರಕ್ತದಾನ ಮುಂದಿನ ದಿನಗಳಲ್ಲಿ ಜಾಸ್ತಿ ಆಗಿ ನಡೆಯಬೇಕು. ಜನ ಮೆಚ್ಚಿದ ಕಾರ್ಯಕ್ರಮಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ.ಅದೇ ರೀತಿ ಶಿಕ್ಷಣ ಕ್ಕೂ ನಾವು ಒತ್ತು ನೀಡಬೇಕು ಎಂದು ಉಳ್ಳಾಲ ಇನ್ಸ್ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಹೇಳಿದರು

ಅವರು ರಹಮಾನಿಯಾ ಜುಮಾ ಮಸೀದಿ ಪೇಟೆ ಉಳ್ಳಾಲ ಇದರ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದೊಂದಿಗೆ ರಹಮಾನಿಯಾ ಮಸೀದಿ ವಠಾರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ರಹಮಾನಿಯಾ ಜುಮಾ ಮಸೀದಿ ಖತೀಬ್ ಇಬ್ರಾಹೀಮ್ ಮದನಿ ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಹಾಜಿ ರಶೀದ್ ಮಾತನಾಡಿ, ಈ ಮಸೀದಿ ವತಿಯಿಂದ ಹಲವು ಕಾರ್ಯಕ್ರಮಗಳು ನಡೆದಿವೆ.ಗಾಂಜಾ, ಮಾದಕದ್ರವ್ಯ ಸೇವನೆಯ ವಿರುದ್ಧ ಅಭಿಯಾನ ಕೂಡ ನಡೆದಿದೆ.ಈಗ ರಕ್ತದಾನ ಶಿಬಿರ ಹಮ್ಮಿಕೊಂಡು ಸಮಾಜ ಸೇವೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಮಸೀದಿ ಆಡಳಿತ ಸಮಿತಿಯ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ರಹಮಾನಿಯ ಜುಮಾ ಮಸೀದಿ ಪೇಟೆ ಇದರ ಅಧ್ಯಕ್ಷ ಹಾಜಿ ಮೊಯ್ಯದ್ದೀನ್ ಹಸನ್ ಮಾತನಾಡಿ ರಕ್ತದಾನದ ಅಗತ್ಯತೆ ಬಗ್ಗೆ ವಿವರಿಸಿದರು. ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಡಾ.ಯು.ಟಿ.ಇಫ್ತಿಕಾರ್ ಕಾರ್ಯಕ್ರಮ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಡಾ.ಯು.ಟಿ.ಇಫ್ತಿಕಾರ್ ಹಾಗೂ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ,ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್. ಕೆಎಂಸಿ ಸಿಬ್ಬಂದಿ ಡಾ ಅಂಜನ್ , ಜೊತೆ ಕಾರ್ಯದರ್ಶಿ,ತೌಸೀಫ್, ಸದಸ್ಯ ಅಝೀಮ್,ಶರಾಫತ್, ಶರೀಫ್, ಅಫ್ರಿದ್ ಕೊಟ್ಟಾರ, ಬುಸ್ಥಾನುಲ್ ಉಲುಮ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಫಯಾಝ್ ಕೊಟ್ಟಾರ ಟೀಮ್ ಬ್ಲ್ಯಾಕ್ ಅಂಡ್ ವೈಟ್ ಅಧ್ಯಕ್ಷ ಶಹೀರ್ ಪೇಟೆ ಮತ್ತಿತರರು‌ ಉಪಸ್ಥಿತರಿದ್ದರು.

ಅಬ್ದುಲ್ ನಾಸರ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿದರು.ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News