ಪಾದುವಾ ಶಿಕ್ಷಣ ಸಂಸ್ಥೆಗಳಿಂದ ಹಸಿರು ಭರಿತ, ಸ್ವಚ್ಚ ಮತ್ತು ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಗುಡ್ಡಗಾಡು ಓಟ

Update: 2024-10-27 15:21 GMT

ಮಂಗಳೂರು: ಪಾದುವಾ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ಪಾದುವಾ ಪದವಿ ಪೂರ್ವ ಕಾಲೇಜು ಹಾಗೂ ಪಾದುವಾ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಬೆಳ್ಳಿ ಮಹೋತ್ಸವದ ಅಂಗವಾಗಿ ಪಾದುವ ಸ್ಪೋರ್ಟ್ಸ್ ಕ್ಲಬ್ ನ ಸಹಭಾಗಿತ್ವದಲ್ಲಿ ಪಾದುವಾ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ , ಪ್ರೌಢ, ಪದವಿ ಪೂರ್ವ, ಪದವಿ ಮತ್ತು ಹಳೆ ವಿದ್ಯಾರ್ಥಿಗಳಿಗಾಗಿ ಗುಡ್ಡಗಾಡು ಓಟವನ್ನು ಆಯೋಜಿಸಲಾಗಿತ್ತು.

ಸುಮಾರು 350 ವಿಧ್ಯಾರ್ಥಿ ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಓಟವನ್ನು ಉದ್ಘಾಟಿಸಿ ಮಾತನಾಡಿದ ಪಾದುವಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಂ. ವಾಲ್ಟರ್ ಡಿಸೋಜಾರವರು ದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ,ಹಸಿರು ಭರಿತ ಮತ್ತು ಸ್ವಚ್ಚ ಪರಿಸರವನ್ನು ನಿರ್ಮಿಸುವುದು ನವ ಯುವಕರ ಕರ್ತವ್ಯವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಶ್ರೀಕಾಂತ್ ಅಮೀನ್, ನ್ಯೂಮನ್ ಮೆನ್ಡೊಸಾ ಹಾಗೂ ನಿರೀಕ್ಷಿತ್ ದೇವಾಡಿಗ ಭಾಗವಹಿಸಿದ್ದರು. ಪಾದುವಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ. ಅರುಣ್ ವಿಲ್ಸನ್ ಲೋಬೊ ಮತ್ತು ಪಾದುವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾರಿಯೆಟ್ ಮಸ್ಕರೇನ್ಹಸ್ ಮತ್ತು ಪಾದುವ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಲಿ ಡಿಸೋಜಾ ರವರು ಮಾರ್ಗದರ್ಶನ ಗೈದರು ,ಕಾರ್ಯಕ್ರಮ ಸಂಯೋಜಕರಾದ ಪಾದುವ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ಹರಿಪ್ರಸಾದ್ , ಪಾದುವ ಪದವಿ ಪೂರ್ವ ಕಾಲೇಜಿನ ದೈಹಿಕ ನಿರ್ದೇಶಕರಾದ ಜಗದೀಶ್, ಕನ್ನಡ ಉಪನ್ಯಾಸಕರಾದ ಪ್ರವೀಣ್ ರೈ ಕುಕ್ಕುವಳ್ಳಿ ಮತ್ತು ಪಾದುವ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ಯತಿರಾಜ್ ಉಪಸ್ಥಿತರಿದ್ದರು.

ಪಾದುವಾ ಶಿಕ್ಷಣ ಸಂಸ್ಥೆಯ ಭೋದಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಕದ್ರಿ , ಕಂಕನಾಡಿ ಮತ್ತು ಕಾವೂರು ಠಾಣೆಯ ಆರಕ್ಷಕರು ಮತ್ತು ಎನ್ ಎಸ್ ಎಸ್ ಸ್ವಯಂ ಸೇವಕರು ಸುರಕ್ಷಿತ ಓಟಕ್ಕಾಗಿ ಸಹಕರಿ ಸಿದರು. ಪಾದುವಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ರೋಶನ್ ಸಾಂತು ಮಾಯೆರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News