ದ.ಕ. ಜಿಲ್ಲಾ ಮಟ್ಟದ ಅಲ್ ಬಿರ್ರ್‌ ಕಿಡ್ಸ್ ಫೆಸ್ಟ್ ಉದ್ಘಾಟನೆ

Update: 2024-11-26 17:20 GMT

ಮಂಗಳೂರು, ನ.26: ದ.ಕ.ಜಿಲ್ಲಾ ಮಟ್ಟದ ಅಲ್ ಬಿರ್ರ್‌ ಶಾಲೆಗಳ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು ಕೈಕಂಬ ಸಬೀಲ್ ಉಲ್ ಹುದಾ ಅಲ್ ಬಿರ್ರ್‌ ಶಾಲೆಯ ಸಭಾಂಗಣದಲ್ಲಿ ಎಸ್ಕೆಎಸೆಸ್ಸೆಫ್ ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮಿಯ ದುಆದೊಂದಿಗೆ ಆರಂಭಗೊಂಡಿತು.

ಸೂರಲ್ಪಾಡಿಯ ಮಲ್ಹರುಲ್ ಅವಕಿಫ್ ಜುಮಾ ಮಸೀದಿಯ ಮುದರ್ರಿಸ್ ಹೈದರ್ ದಾರಿಮಿ ಉದ್ಘಾಟಿಸಿದರು. ಸಬೀಲ್ ಉಲ್ ಹುದಾ ಅಲ್ ಬಿರ್ರ್‌ ಶಾಲೆಯ ಅಧ್ಯಕ್ಷ ಆಸೀಫ್ ಹಾಜಿ ಆದರ್ಶ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದರು. ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಮೊಹಿದಿನ್ ಹಾಜಿ ಅಡ್ಡೂರು ಹಾಗೂ ಗುರಪುರ ರೇಂಜ್ ಅಧ್ಯಕ್ಷ ಮೆಟ್ರೋ ಸಾಹುಲ್ ಹಮೀದ್ ಹಾಜಿ ಶುಭ ಹಾರೈಸಿದರು.

ಬೈಲುಪೇಟೆ ಜುಮಾ ಮಸೀದಿಯ ಅಧ್ಯಕ್ಷ ಝಕರಿಯಾ ಹಾಜಿ ಅಡ್ಡೂರು, ಸಂಶುಲ್ ಉಲಮಾ ಶರೀಯತ್ ಕಾಲೇಜಿನ ಅಧ್ಯಕ್ಷ ರಿಯಾಝ್ ಮಿಲನ್, ಕೈಕಂಬ ಅಲ್ ಬಿರ್ರ್‌ ನಿರ್ದೇಶಕ ಹಂಝ ಮಿಶ್ರಿಯಾ, ಕಣ್ಣೂರ್ ಅಲ್ ಬಿರ್ರ್‌ ಶಾಲೆಯ ಸಂಯೋಜಕ ಸಿತಾರ್ ಮಜೀದ್ ಹಾಜಿ, ಡಾ. ಅಬೂಬಕ್ಕರ್ ಸಿದ್ದೀಕ್ ಅಡ್ಡೂರು, ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ವಿಖಾಯ ಅಧ್ಯಕ್ಷ ಇಬ್ರಾಹಿಂ ಕುಕ್ಕಟ್ಟೆ, ಅಲ್ ಬಿರ್ರ್‌ ಶಾಲೆಯ ತಪಾಸಣಾಧಿಕಾರಿಗಳಾದ ಎನ್.ಕೆ. ಅಹ್ಮದ್, ಮುಹಮ್ಮದ್ ಅಲಿ, ಶೈಕ್ಷಣಿಕ ಸಂಘಟಕ ಮುಹಮದ್ ಕುಟ್ಟಿ, ಕಿಡ್ಸ್ ಫೆಸ್ಟ್ ಉಸ್ತುವಾರಿಗಳಾದ ನವಾಝ್ ವಯತಳ, ಝೈನುಲ್ ಆಬಿದೀನ್, ಮುಹಮ್ಮದ್ ಹುದವಿ, ಮಾರ್ತಬೈಲ್ ಮದ್ರಸ ಅಧ್ಯಕ್ಷ ಅಶ್ರಫ್ ಸೋನ, ಜಿಲ್ಲಾ ಕೌನ್ಸಿಲರ್ ಮುಸ್ತಫಾ ಸೈಟ್, ಸರ್ಗಲಯಾ ಚೈರ್ಮೆನ್ ಶರೀಫ್ ನಾಡಜೆ, ಅಲ್ ಬಿರ್ರ್‌ ಅಡ್ಡೂರು ಶಾಲೆಯ ಸಂಯೋಜಕ ಅಬ್ದುಲ್ ಖಾದರ್, ಅಲ್ತಾಫ್ ಲೋರೆಟ್ಟೋ ಪದವು, ಶೇಕ್ ಮುಹಮ್ಮದ್ ಕೈಕಂಬ, ಅಲ್ ಬಿರ್ರ್‌ ಕೈಕಂಬ ಶಾಲೆಯ ಸಂಯೋಜಕ ಶರೀಫ್ ಮಳಲಿ, ದ.ಕ. ಜಿಲ್ಲೆಯ ಎಲ್ಲಾ ಅಲ್ ಬಿರ್ರ್‌ ಶಾಲೆಗಳ ಮುಖ್ಯ ಶಿಕ್ಷಕಿಯರು ಭಾಗವಹಿಸಿದರು.

ಕೈಕಂಬ ಅಲ್ ಬಿರ್ರ್‌ ವಿದ್ಯಾರ್ಥಿ ಮುಹಮ್ಮದ್ ನಯಿಮುದ್ದಿನ್ ಕಿರಾಅತ್ ಪಠಿಸಿದರು. ಅಲ್‌ಬಿರ್ರ‌್‌ ಸಂಯೋಜಕ ಆರೀಫ್ ಕಮ್ಮಾಜೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News