ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿಲ್ಲ: ಅಧೀಕ್ಷಕರ ಸ್ಪಷ್ಟನೆ

Update: 2024-11-26 17:47 GMT

ಸಾಂದರ್ಭಿಕ ಚಿತ್ರ

ಮಂಗಳೂರು: ನಗರದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ತನ್ನ ಮಗು ಮಾರಾಟವಾಗಿದೆ ಎಂದು ಭವ್ಯಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಸುಳ್ಳಾಗಿದೆ. ಆಕೆಯ ಈ ಆರೋಪವು ಸಂಪೂರ್ಣ ನಿರಾಧಾರವಾಗಿದೆ ಎಂದು ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.

ಆ.18ರಂದು ಬೆಳಗ್ಗೆ 9.58ಕ್ಕೆ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಭವ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಬಳಿಕ ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಜ್ಞರು ಆಕೆಗೆ ತಿಳಿಸಿದ ಸಂದರ್ಭ ಆ ಶಿಶು ತನ್ನದಲ್ಲವೆಂದು ಆಕೆ ನಿರಾಕ ರಿಸಿದ್ದರು. ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿರುತ್ತಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿ ದ್ದರು. ಈ ವಿಚಾರದಲ್ಲಿ ಪೊಲೀಸ್ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಮಾಡುವ ಸಲು ವಾಗಿ ಪ್ರಕ್ರಿಯೆಯನ್ನು ನಡೆಸಲಾಗಿದೆ. ಡಿಎನ್‌ಎ ಪರೀಕ್ಷೆಯ ವರದಿಯನ್ನು ನೇರವಾಗಿ ತನಿಖಾಧಿಕಾರಿಗಳ ಮೂಲಕ ನ್ಯಾಯಾಲಯಕ್ಕೆ ಸಂಬಂಧಿತರು ನೀಡಿದ್ದರು.

ಈ ಮಧ್ಯೆ ಭವ್ಯಾ ಶಿಶುವು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಇತ್ತೀಚಿನ ಎರಡು ದಿನಗಳಲ್ಲಿ ಭವ್ಯಾ ತನ್ನ ಶಿಶುವನ್ನು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿರುತ್ತಾರೆ ಎಂದು ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸುತ್ತಾ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿ ದ್ದಾರೆ. ಅಲ್ಲದೆ ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಸರಕಾರಿ ಸ್ವಾಮ್ಯದ ಸರಕಾರಿ ಲೇಡಿಗೋಶನ್ ಆಸ್ಪತ್ರೆಗೆ ಕಳಂಕವನ್ನು ತರುವ ವಿಚಾರಗಳು ಖೇದಕರ. ಈ ಪ್ರಕರಣವು ನ್ಯಾಯಾಲಯದ ಪರಾಮರ್ಶೆಯ ಹಂತದಲ್ಲಿರುವ ಕಾರಣ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News