ಸಕಾಲ ಅರ್ಜಿ ವಿಲೇವಾರಿ: ದ.ಕ. ಜಿಲ್ಲೆ ಪ್ರಥಮ
Update: 2025-04-01 19:30 IST

ಮಂಗಳೂರು, ಎ.1: ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ ದ.ಕ. ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಮಾರ್ಚ್‌ನಲ್ಲಿ 1,09,562 ಅರ್ಜಿಗಳು ಸಕಾಲ ಮಿಷನ್‌ನಡಿ ವಿಲೇವಾರಿಯಾಗಿದೆ.
3,583 ಅರ್ಜಿಗಳು ತಿರಸ್ಕೃತಗೊಂಡಿದೆ. ಶೇ.96ರಷ್ಟು ಅರ್ಜಿಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.