ಎ.9, 10ರಂದು ಪುಚ್ಚೆಮೊಗರು ಎಲಿಯ ಉರೂಸ್

ಮೂಡುಬಿದಿರೆ: ಕಾರ್ಕಳ ಇರುವೈಲು ಪುಚ್ಚಮೊಗರು ಎಲಿಯ ಮನಾರುಲ್ ಹುದಾ ಜುಮಾ ಮಸೀದಿಯ ದರ್ಗಾದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸೈಯದ್ ಡಾ. ಅಬೂಬಕರ್ ವಲಿಯುಲ್ಲಾಹಿ (ಖ.) ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಈ ಬಾರಿ ಎ.9 ಮತ್ತು 10ರಂದು ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್, ಎ.9ರ ಸಂಜೆ ಮಸೀದಿಯ ವಠಾರದಲ್ಲಿ ಮಸೀದಿಯ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ 5 ಗಂಟೆಗೆ ದಫ್ ಕಾರ್ಯಕ್ರಮ ಹಾಗೂ ಮಗ್ರಿಬ್ ನಮಾಝ್ ಬಳಿಕ ಅಸ್ಸೈಯದ್ ಕಾಜೂರು ತಂಙಳ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸುವರು.ಉಮರ್ ಸಅದಿ ಅಲ್-ಅಫೈಲಿ ನಾವೂರು ಮುಖ್ಯ ಪ್ರವಚನ ನೀಡಲಿದ್ದಾರೆ.
ಎ.10ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 4 ಗಂಟೆಗೆ ಅಸ್ಸೈಯದ್ ಕಾಜೂರು ತಂಙಳ್ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಜರುಗಲಿದೆ. 5:30ಕ್ಕೆ ಸರ್ವ ಧರ್ಮದ ಸೌಹಾರ್ದ ಕೂಟ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರವಚನ ನೀಡಲಿದ್ದಾರೆ. ಅಂದು ರಾತ್ರಿ 10ರಿಂದ ಅನ್ನದಾನ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸೀದಿ ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್, ಕೋಶಧಿಕಾರಿ ಐ.ಎಂ.ಇಕ್ಬಾಲ್, ಸದಸ್ಯ ಎಂ. ಆಸಿಫ್, ಇಸ್ಮಾಯೀಲ್ ಉಪಸ್ಥಿತರಿದ್ದರು.