ಎ.18ರ ಧಾರ್ಮಿಕ ನಾಯಕತ್ವದ ಹೋರಾಟಕ್ಕೆ ಬಲ ತುಂಬೋಣ: ಫಾರೂಕ್ ಉಳ್ಳಾಲ್

ಫಾರೂಕ್ ಉಳ್ಳಾಲ್
ಮಂಗಳೂರು: ರಾಜಕೀಯ ಒತ್ತಾಸೆಗಳಿಲ್ಲದೆ, ಕೇವಲ ಇಸ್ಲಾಮಿನ ಹೆಸರಲ್ಲಿ ನಡೆಯುವ ವಕ್ಫ್ ತಿದ್ದುಪಡಿಯ ವಿರುದ್ಧ ಎ.18ರಂದು ಅಡ್ಯಾರ್ ಕಣ್ಙೂರ್ ನಲ್ಲಿ ನಡೆಯುವ ಪ್ರತಿಭಟನಾ ಸಭೆ ಸಮರ್ಥನೀಯ ಮತ್ತು ಕರಾವಳಿಯ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ವಿನಂತಿಸಿದ್ದಾರೆ.
ವಕ್ಫ್ ಎಂಬುವುದು (ಭಾರತದಲ್ಲಿ) ಇಸ್ಲಾಮಿನ ತತ್ವಾದರ್ಶಗಳ ಪಾಲನೆಯಾಗಿದೆ. ಆದ್ದರಿಂದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಹೋರಾಟದ ನಾಯಕತ್ವವನ್ನು ಮುಸ್ಲಿಂ ಧಾರ್ಮಿಕ ನಾಯಕರು ವಹಿಸುವುದು ನ್ಯಾಯೋಚಿತವಾಗಿದೆ ಎಂದು ಹೇಳಿರುವ ಫಾರೂಕ್ ಉಳ್ಳಾಲ್, ಕೇಂದ್ರ ಸರ್ಕಾರದ ಮುಸ್ಲಿಂ ದ್ವೇಷ ಸಾಧನೆಯಂತಿರುವ ವಕ್ಫ್ ಸಂಹಿತೆಯ ತಿದ್ದುಪಡಿಯ ವಿರುದ್ಧದ ಹೋರಾಟದ ನಾಯಕತ್ವವನ್ನು ಮುಸ್ಲಿಂ ಧರ್ಮ ಗುರುಗಳು ವಹಿಸಿರುವುದು ಸ್ವಾತಂತ್ರ್ಯ ಪೂರ್ವದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಅಂದಿನ ಮುಸ್ಲಿಂ ಧಾರ್ಮಿಕ ನೇತಾರರು ನಡೆಸಿದ ಹೋರಾಟ ಮತ್ತು ಯಶಸ್ಸನ್ನು ನೆನಪಿಸುತ್ತಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.