ಮಿಲಾಗ್ರಿಸ್ ಚರ್ಚ್‌ನಲ್ಲಿ ಗರಿಗಳ ಭಾನುವಾರ ಆಚರಣೆ
Update: 2025-04-13 10:42 IST

ಮಂಗಳೂರು: ಮಿಲಾಗ್ರಿಸ್ ದೇವಾಲಯದಲ್ಲಿ ಗರಿಗಳ ಭಾನುವಾರವನ್ನು ಆಚರಿಸಲಾಯಿತು. ವಂದನೀಯ ಧರ್ಮ ಗುರು ಮೈಕಲ್ ಸಾಂತುಮಾಯೆರ್ ಗರಿಗಳನ್ನು ಆಶೀರ್ವದಿಸಿ ಬಲಿ ಪೂಜೆಯನ್ನು ಅರ್ಪಿಸಿದರು.
ವಂದನೀಯ ಧರ್ಮ ಗುರುಗಳಾದ ಬೋನವೆಂಚೆರ್ ನಝರೆತ್, ಉದಯ್ ಫೆರ್ನಾಂಡಿಸ್, ರೋಬಿನ್ ಸಾಂತು ಮಾಯೆರ್, ಜೆರಾಲ್ಡ್ ಪಿಂಟೋ, ಮತ್ತು ಧರ್ಮ ಭಗಿನಿಯರು, ಭಕ್ತಾದಿ ಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.