ಕ್ರೀಡಾ ವಸತಿ ಶಾಲೆ, ನಿಲಯಗಳ ಪ್ರವೇಶಕ್ಕೆ ವಿಶೇಷ ಆಯ್ಕೆ ಶಿಬಿರ

Update: 2025-04-13 22:46 IST
  • whatsapp icon

ಬೆಂಗಳೂರು : ರಾಜ್ಯದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆ / ನಿಲಯಗಳಿಗೆ ಪ್ರತೀ ವರ್ಷ ಆಯ್ಕೆ ಶಿಬಿರಗಳ ಮೂಲಕ ಕ್ರೀಡಾಪಟುಗಳ ಆಯ್ಕೆ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಬಾಲಕ ಮತ್ತು ಬಾಲಕಿಯರಿಗೆ ಮತ್ತೊಂದು ವಿಶೇಷ ಅವಕಾಶವನ್ನು ನೀಡುವ ದೃಷ್ಟಿಯಿಂದ 2025-26 ನೇ ಸಾಲಿನಲ್ಲಿ ವಿಶೇಷ ಆಯ್ಕೆ ಶಿಬಿರವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

ಎಪ್ರಿಲ್ 15 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್ , ವಾಲಿಬಾಲ್, ಫೆನ್ಸಿಂಗ್, ಆರ್ಚರಿ ಹಾಗೂ ಧಾರವಾಡದ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ ಬಾಲ್, ವಾಲಿಬಾಲ್, ಸೈಕ್ಲಿಂಗ್, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಮತ್ತು ಕಬ್ಬಡಿ, ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ, ಹಾಕಿ, ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್, ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಆಯ್ಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಎ. 17 ರಂದು ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ಬಾಲ್, ವಾಲಿಬಾಲ್, ಕಬಡ್ಡಿ, ಬೀದರ್ ನ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕ್ಲಿಂಗ್, ಬಳ್ಳಾರಿಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಪುಟ್ಬಾಲ್, ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ, ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜುಡೋ ತರಬೇತಿ ಆಯ್ಕೆ ಶಿಬಿರಗಳನ್ನು ಆಯೋಜಿಸಲಾಗಿದೆ.

ರಾಜ್ಯದಾದ್ಯಂತ ಒಟ್ಟು 2 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯಗಳನ್ನು ಹೊಂದಿದೆ. ಈ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ 5ನೇತರಗತಿ, 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ. ಹಂತದ ಕ್ರೀಡಾಪಟುಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದ್ದು ಕ್ರೀಡಾಪಟುಗಳಿಗೆ ಉಚಿತ ಊಟೋಪ ಹಾರ, ವಸತಿ, ವೈಜ್ಞಾನಿಕ ಕ್ರೀಡಾ ತರಬೇತಿ, ಕ್ರೀಡಾ ಸಲಕರಣೆಗಳು, ಕ್ರೀಡಾ ಸಮವಸ್ತ್ರ ಕ್ರೀಡಾಕೂಟ ಗಳಲ್ಲಿ ಭಾಗವಹಿಸಲು ದಿನಭತ್ಯೆ/ಪ್ರಯಾಣ ಭತ್ಯೆ ಇತ್ಯಾದಿಗಳನ್ನು ಒದಗಿಸಲಾಗುತ್ತಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ದಾಖಲಿಸಿರುತ್ತಾರೆ.

ಆಯ್ಕೆ ನಿಯಮಗಳು: ರಾಜ್ಯದ ಯಾವುದೇ ಭಾಗದ ಕ್ರೀಡಾಪಟುಗಳು ಯಾವುದೇ ಸ್ಥಳದ ಆಯ್ಕೆ ಶಿಬಿರ ದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. 2025-26 ನೇ ಸಾಲಿನ ಪ್ರವೇಶಕ್ಕೆ ಈಗಾಗಲೇ ಆಯೋಜಿಸ ಲಾದ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸದ ಅಭ್ಯರ್ಥಿಗಳು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಬ ಹುದು. ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗಿಯಾಗಿರುವ ಆದರೆ, ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಉದ್ದೇಶಿಸಿದಲ್ಲಿ ಈ ಬಗ್ಗೆ ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ದಾಖಲಿಸಿ, ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದು. ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಈಗಾಗಲೇ ಆಯ್ಕೆಯಾಗಿರುವವರು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ.

8 ನೇ ತರಗತಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡು ತ್ತಿದ್ದು, 8ನೇ ತರಗತಿ ಪ್ರವೇಶಕ್ಕೆ ಜೂನ್-2025 ಕ್ಕೆ ಅನ್ವಯವಾಗುವಂತೆ 14 ವರ್ಷ ವಯಸ್ಸಿನ ಒಳಗೆ ಇರಬೇಕು. ಪ್ರಥಮ ಪಿ.ಯು.ಸಿ. ಪ್ರವೇಶ ಬಯಸುವ ಅಭ್ಯರ್ಥಿಗಳ ವಯಸ್ಸು ಜೂನ್-2025 ಕ್ಕೆ ಅನ್ವಯವಾಗುವಂತೆ 18 ವರ್ಷ ವಯಸ್ಸಿನ ಒಳಗೆ ಇರಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಆಯಾ ಸ್ಥಳಗಳಲ್ಲಿ ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳತಕ್ಕದ್ದು. ವಾಲಿಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಹೊರತುಪಡಿಸಿ, ಇತರೆ ಕ್ರೀಡೆಗಳಲ್ಲಿ ಅಸಾಧಾರಣ ಸಾಧನೆ ತೋರುವ ಕ್ರೀಡಾಪಟುಗಳಿಗೆ ಎತ್ತರದ ಅರ್ಹತಾ ಮಾನದಂಡದಲ್ಲಿ ಸಡಿಲಿಕೆ ನೀಡಲಾಗುವುದು.

ಈ ಶಿಬಿರಗಳಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯ ಮಟ್ಟದ ಆಯ್ಕೆ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ, ಅರ್ಹರಾದಲ್ಲಿ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ ಪ್ರವೇಶ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಯುವ ಸಹಾಯವಾಣಿ ಸಂಖ್ಯೆ: 155265 ಅಥವಾ ನಿಮ್ಮ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನು ಸಂಪರ್ಕಿಸಬ ಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News