ಜಾಮರ್ ಸಮಸ್ಯೆ ಪರಿಹರಿಸದಿದ್ದಲ್ಲಿ ಜೈಲಿಗೆ ಮುತ್ತಿಗೆ: ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ
Update: 2025-04-01 20:39 IST

ಮಂಗಳೂರು, ಎ.1: ನಗರದ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ನಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಎ.3ರೊಳಗೆ ಈ ಸಮಸ್ಯೆ ಬಗೆಹರಿಸಿದ್ದರೆ ಎ.4ರಂದು ರಾಸ್ತಾ ರೋಕೋ ನಡೆಸಿ ಜೈಲ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಶಾಸಕ ಡಾ. ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.
ಜೈಲ್ ಜಾಮರ್‌ನಿಂದಾಗಿ ಸುತ್ತಮುತ್ತ ವ್ಯಾಪಾರಿಗಳು, ನಾಗರಿಕರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ರಾಸ್ತಾ ರೋಕೋ ನಡೆಸಿ ಮುತ್ತಿಗೆ ಹಾಕುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.