ಬಜ್ಪೆ: ಮನೆಗೆ ನುಗ್ಗಿ ಅಪಾರ ಮೌಲ್ಯದ ಚಿನ್ನಾಭರಣ ಕಳವು

Update: 2025-04-01 23:15 IST
ಬಜ್ಪೆ: ಮನೆಗೆ ನುಗ್ಗಿ ಅಪಾರ ಮೌಲ್ಯದ ಚಿನ್ನಾಭರಣ ಕಳವು
  • whatsapp icon

ಬಜ್ಪೆ: ಮನೆಯೊಂದರ ಕಿಟಕಿ ಬಾಗಿಲು ಮುರಿದು ಅಪಾರ ಮೌಲ್ಯದ ಚಿನ್ನಾಭರಣ ಕಳವು ಗೈದಿರುವ ಪ್ರಕರಣ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಮಂಗಳವಾರ ವರದಿಯಾಗಿದೆ.

ಪೆರ್ಮುದೆ ನಿವಾಸಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ ಎಂದು ತಿಳಿದು ಬಂದಿದ್ದು, ಕಳ್ಳರು ಸುಮಾರು 1.080ಕೆಜಿಯ ಸುಮಾರು 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯ ಮಾಲಕ ಪ್ರವೀಣ್ ಪಿಂಟೊ ಅವರು ಕುಟುಂಬ ಸಮೇತರಾಗಿ ಮಸ್ಕತ್ ನಲ್ಲಿದ್ದು, ಮಾ.31ರ ರಾತ್ರಿಯಿಂದ ಎ.1ರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯ ಕೋಣೆಯೊಂದರ ಕಬ್ಬಣದ ಸರಳುಗಳನ್ನು ತುಂಡರಿಸಿ ಒಳಹೊಕ್ಕ ಕಳ್ಳರು ಕೊಣೆಯಲ್ಲಿದ್ದ ಬೀರುವನ್ನು ಒಡೆದು ವಿವಿಧ ಆಭರಣಗಳನ್ನು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ ಪ್ರವೀಣ್ ಅವರ ತಾಯಿ ಮಸ್ಕತ್ ನಲ್ಲಿ ಬಜ್ಪೆ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಅನುಮಾನ ಗೊಂಡು ಪರಿಚಯದ ಟ್ಯಾಕ್ಸಿ ಚಾಲಕರಾಗಿರುವ ಅಬ್ದುಲ್ ಬಶೀರ್ ಅವರಿಗೆ ಕರೆ ಮಾಡಿ ತಿಳಿಸಿದ್ದರು ಅದರಂತೆ ಅವರು ಬಂದು ಮನೆ ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್, ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ , ಸ್ವಾನ ದಳ, ಬೆರಳಚ್ಚದು ತಜ್ಞರ ತಂಡ ಭೆಟಿ ನೀಡಿ ಪರಿಶೀಪನೆ ನಡೆಸಿದೆ ಎಂದು ತಿಳಿದು ಬಂದಿದೆ‌.

ಘಟನೆಗೆ ಸಂಬಂಧಿಸಿದಂತೆ ಬಶೀರ್ ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News