ಮಂಗಳೂರು: ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ

Update: 2025-04-04 23:07 IST
ಮಂಗಳೂರು: ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ
  • whatsapp icon

ಮಂಗಳೂರು: ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.

ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಾದಕ ವಸ್ತು ಗಳನ್ನು ಪತ್ತೆ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತೀ ಉತ್ತಮ ಮತ್ತು ಶ್ಲಾಘನೀಯ ಕರ್ತವ್ಯ ನಿರ್ವಹಿಸಿ 2024 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಎಸಿಪಿ ಧನ್ಯಾ ನಾಯಕ್, ಪೊಲೀಸ್ ನಿರೀಕ್ಷರಾದ ಬಾಲಕೃಷ್ಣ ಎಚ್.ಎನ್, ಮಹೇಶ್ ಪ್ರಸಾದ್, ಪಿಎಸ್‌ಐ ಗಳಾದ ಗುರಪ್ಪ ಕಾಂತಿ, ಸಂತೋಷ್ ಕುಮಾರ್ ಡಿ, ರಾಘವೇಂದ್ರ ನಾಯ್ಕ, ಎಎಸ್‌ಐ ಶೀನಪ್ಪ, ಎಆರ್‌ಎಸ್‌ಐ ರಿತೇಶ್, ಸಿಹೆಚ್‌ಸಿ ರೆಜಿ ವಿ.ಎಂ, ಅಂಜನಪ್ಪ, ಭೀಮಪ್ಪ ಉಪ್ಪಾರ, ಅಣ್ಣಪ್ಪ, ಉಮೇಶ್, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ್ ಕೆ, ವಿಜಯ್ ಶೆಟ್ಟಿ, ಸಿಪಿಸಿ ಪುರುಷೋತ್ತಮ್, ಶ್ರೀಧರ ವಿ,ಪ್ರಕಾಶ್ ಎಸ್ ಸತ್ತಗಿ ಹಳ್ಳಿ, ಅಭಿಷೇಕ್ ಎ.ಆರ್, 2023 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪಿಎಸ್‌ಐ ಶರಣಪ್ಪ ಭಂಡಾರಿ ಎಎಸ್‌ಐ ಮೋಹನ್ ಕೆ.ವಿ, ಸಿಎಚ್‌ಸಿ ನಾಗರಾಜ ಚಂದರಗಿ, ಮುತ್ತು ಎಂ, ಎಫ್‌ಪಿಬಿ. 2022 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ, ಪಿಎಸ್‌ಐ ಸುದೀಪ್ ಎಂ.ವಿ, ಎಎಸ್‌ಐ ಸಂತೋಷ್ ಕುಮಾರ್ ಕೆ, ಸಿಎಚ್‌ಸಿ ಮಣಿಕಂಠ ಎಂ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News