ನಿಫಾ ವೈರಸ್: ಮುನ್ನೆಚ್ಚರಿಕೆ ವಹಿಸಲು ಮನವಿ
Update: 2023-09-14 16:24 GMT
ಮಂಗಳೂರು: ಕೇರಳ ರಾಜ್ಯದಲ್ಲಿ ಕಂಡು ಬಂದ ನಿಫಾ ವೈರಸ್ ರೋಗವು ಹಬ್ಬುವ ಮುನ್ನ ಮುನ್ನೆಚ್ಚರಿಕೆ ವಹಿಸಲು ವಿಧಾನ ಪರಿಷತ್ ಮಾಜಿ ಸದಸ್ಯ, ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.
ಈ ರೋಗವು ಅತೀ ವೇಗದಿಂದ ಹರಡುತ್ತಿದೆ. ಕೇರಳದ ಜನತೆ ಹೆಚ್ಚಿನ ವಿಷಯಗಳಲ್ಲಿ ದ.ಕ. ಜಿಲ್ಲೆಯನ್ನು ಅವಲಂಬಿಸುತ್ತಿ ರುವ ಕಾರಣ ಮಂಗಳೂರು ನಗರ ಸಹಿತ ಗಡಿ ಪ್ರದೇಶಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮ ದೊಂದಿಗೆ ವಿಶೇಶ ನಿಗಾ ವಹಿಸಬೇಕಾಗಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಒತ್ತಾಯಿಸಿದ್ದಾರೆ.