ನಾಳೆ ಉಳ್ಳಾಲದಲ್ಲಿ ನೂರೇ ಅಜ್ಮೀರ್

Update: 2024-01-20 09:59 GMT

ಉಳ್ಳಾಲ:  ನೂರೆ ಅಜ್ಮೀರ್ ಸ್ಪಿರಿಚುವಲ್ ಮಜ್ಲಿಸ್  ಉಳ್ಳಾಲ ಇದರ ಆಶ್ರಯದಲ್ಲಿ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ರವರ ನೇತೃತ್ವದ 'ನೂರೇ ಅಜ್ಮೀರ್' ಆಧ್ಯಾತ್ಮಿಕ ಮಹಾ ಸಂಗಮ ಜನವರಿ 21 ಭಾನುವಾರ ಸಂಜೆ ಐದು ಗಂಟೆಗೆ ಉಳ್ಳಾಲ ಮಾಸ್ತಿಕಟ್ಟೆ ಸಮೀಪದ ಬೈಲ್ ಎಂಬಲ್ಲಿ ನಡೆಯಲಿದೆ .

ಸಭಾ ಕಾರ್ಯಕ್ರಮವು ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಮಗ್ರಿಬ್ ನಮಾಝ್ ನ ಬಳಿಕ ಉಸ್ತಾದ್ ವಲಿಯುದ್ದೀನ್ ಫೈಝಿಯವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News