ಸೆ.3ರಂದು ‘ಜಿಜ್ಞಾಸಾ-ಸನಾತನ ಚಿಂತನಗಂಗಾ’ ಉಪನ್ಯಾಸ ಮಾಲಿಕೆ ಆರಂಭ

Update: 2023-08-31 10:01 GMT

ಮಂಗಳೂರು, ಆ. 31: ಮಂಗಳೂರು ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರುಫೌಂಡೇಷನ್ ವಿವಿಧ ರೀತಿಯ ಸೇವಾ ಚಟುವಟಿಕೆ ನಡೆಸುತ್ತಿದೆ. ಇದೀಗ

‘ಜಿಜ್ಞಾಸಾ-ಸನಾತನ ಚಿಂತನಗಂಗಾ’ ಎಂಬ ಶೀರ್ಷಿಕೆಯಲ್ಲಿ ದ್ವೈಮಾಸಿಕ ಉಪನ್ಯಾಸ ಮಾಲಿಕೆ ಆರಂಭಿಸಿದೆ. ಇದರ ಮೊದಲ ಕಾರ್ಯಕ್ರಮ ಸೆ.3ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನರಾಮಕೃಷ್ಣ ಮಠದ ಸಭಾಭವನದಲ್ಲಿ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಈ ಬಗ್ಗೆ ಮಾಹಿತಿ ನೀಡಿದರು.ನಾಡಿನ ಪ್ರಸಿದ್ಧ ವಿಜ್ಞಾನಿ, ಚಿಂತಕ, ಲೇಖಕ ಹಾಗ ಸಂಶೋಧಕ ಡಾ.ಆನಂದರಂಗನಾಥ್ ಅವರು ‘ಇಂಡಿಯಾ ಟುವರ್ಡ್ಸ್-2047, ಎ ಲ್ಯಾಂಡ್ ಆಫ್ ಆಪರ್ಚುನಿಟೀಸ್’ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಎನ್.ವಿನಯಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದರು.

ಈ ಸರಣಿ ಉಪನ್ಯಾಸ ಮಾಲಿಕೆ ಸಾಮಾಜಿಕ, ಐತಿಹಾಸಿಕ, ಬೌದ್ಧಿಕ, ಸಾಂಸ್ಕೃತಿಕವಿಷಯಗಳಿಗೆ ಸಂಬಂಧಿಸಿ ಐರೋಪ್ಯ ದೃಷ್ಟಿಕೋನದಿಂದ ಹೊರಬಂದು ಭಾರತೀಯ ಪರಂಪರೆಯ ಜೀವನ ಮೌಲ್ಯಗಳ ನೆಲೆಗಟ್ಟಿನಲ್ಲಿ ಚರ್ಚಿಸಿ ಹೊಸ ಸಾರ್ವಜನಿಕಅಭಿಪ್ರಾಯವನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಮಂಗಳೂರಿನವೈದ್ಯರು, ಇಂಜಿನಿಯರ್ಸ್, ವಕೀಲರು, ಚಾರ್ಟೆಡ್ ಅಕೌಂಟಂಟ್ಸ್, ಬ್ಯಾಂಕ್ ಉದ್ಯೋಗಿಗಳು,ಶಿಕ್ಷಣ ತಜ್ಞರು, ಕೆನರಾ ಚೇಂಬರ್ಸ್, ಮಂಗಳೂರು ಮೆನೇಜ್ಮೆಂಟ್ ಎಸೋಸಿಯೇಷನ್, ವಾಸ್ತು ತಜ್ಞರು, ಕಟ್ಟಡ ನಿರ್ಮಾಪಕರು, ಕ್ರೆಡೈ, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪತ್ರಿಕೆ ಹಾಗೂ ಮಾಧ್ಯಮ ಮಿತ್ರರು ಮುಂತಾದ ಪ್ರತಿಷ್ಠಿತ ನಾಗರಿಕರ ಬಂಧುಗಳಿಗೆ ಇಂತಹ ಉಪನ್ಯಾಸ ಮಾಲಿಕೆ ಆಯೋಜಿಸಲಾಗುತ್ತಿದೆ. ಪ್ರತಿ ಎರಡು ತಿಂಗಳ ಒಂದು ರವಿವಾರ ಈ ಉಪನ್ಯಾಸಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಜ್ಞಾಸ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಸಹ ಸಂಚಾಲಕ ಪ್ರೊ. ಧನೇಶ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News