ಪ್ರಶಾಂತ್ ಪೂಜಾರಿ, ದೀಪಕ್ ರಾವ್ ಕೊಲೆ ಪ್ರಕರಣ: ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಮನವಿ
Update: 2023-12-27 04:28 GMT
ಮಂಗಳೂರು: ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಮತ್ತು ಸುರತ್ಕಲ್ ಕೃಷ್ಣಾಪುರದ ದೀಪಕ್ ರಾವ್ ಕೊಲೆ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ದೀಪಕ್ ರಾವ್ ಅವರ ತಾಯಿ ಪ್ರೇಮಾ ರಾವ್ ಮತ್ತು ಪ್ರಶಾಂತ್ ಪೂಜಾರಿ ತಾಯಿ ಯಶೋದಾ ಪೂಜಾರ್ತಿ ದ.ಕ. ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಶಾಂತ್ ಪೂಜಾರಿಯ ಹತ್ಯೆ 2015ರಲ್ಲಿ ನಡೆದಿದ್ದರೆ, ದೀಪಕ್ ರಾವ್ ಅವರನ್ನು 2019ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳ ತನಿಖೆ ಶೀಘ್ರವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ತನಿಖೆ ಶೀಘ್ರಗತಿಯಲ್ಲಿ ಆಗುತ್ತಿಲ್ಲ. ಆದ್ದರಿಂದ ಗೌರಿ ಲಂಕೇಶ್ ಮತ್ತು ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿರುವ ಮಾದರಿಯಲ್ಲೇ ಪ್ರಶಾಂತ್ ಪೂಜಾರಿ ಮತ್ತು ದೀಪಕ್ ರಾವ್ ಪ್ರಕರಣದ ತನಿಖೆಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.