ತುಳು ಭಾಷೆಗೆ ರಾಜ್ಯದ ಎರಡನೆ ಅಧಿಕೃತ ಭಾಷಾ ಮಾನ್ಯತೆಗೆ ಪ್ರಕ್ರಿಯೆ ಆರಂಭ: ಸ್ಪೀಕರ್ ಯು.ಟಿ.ಖಾದರ್

Update: 2024-08-24 14:38 GMT

ಮಂಗಳೂರು: ತುಳು ರಾಜ್ಯದ ಎರಡನೆ ಅಧಿಕೃತ ಭಾಷೆಯಾಗಿ ಮಾನ್ಯತೆಗೆ ಸರ್ಕಾರದ ಹಂತದಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ನಗರದ ಪುರಭವನದಲ್ಲಿಂದು ನಿರ್ಮಿಸಿದ ಅಡ್ಯಾರ್ ಮಹಾಬಲ ಶೆಟ್ಟಿ ವೇದಿಕೆ ಯಲ್ಲಿ ಹಮ್ಮಿಕೊಂಡ ತುಳುನಾಡ ಜಾನಪದ ಉಚ್ಛಯದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾ ಡುತ್ತಿದ್ದರು.

ರಾಜ್ಯದ ಎರಡನೆ ಭಾಷೆಯಾಗಿ ತುಳು ಭಾಷೆಯನ್ನು ಅಧಿಕೃತ ಗೊಳಿಸಲು ಈಗಾಗಲೇ ಒಂದೆರಡು ಸಭೆಗಳು ನಡೆದು ಪ್ರಕ್ರಿಯೆ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ಅಗತ್ಯವಿದೆ ಎಂದರು. ತುಳು ಭಾಷೆ ಜನರ ಬಾಯಿ ಮಾತಿನಿಂದ ನೂರಾರು ವರ್ಷ ಗಳಿಂದ ಉಳಿದು ಬಂದಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ತುಳು ಗ್ರಾಮ ಸ್ಥಾಪನೆಗೆ ಸಹಾಯ: ತುಳು ನಾಡಿನ ಸಂಸ್ಕೃತಿಯ ಉಳಿವಿಗಾಗಿ ತುಳು ನಾಡಿನ ಕುಲ ಕಸುಬು ವೈಶಿಷ್ಟ್ಯ ಗಳನ್ನು ಜಿಲ್ಲೆ ಗೆ ಭೇಟಿ ನೀಡುವ ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ತುಳು ಗ್ರಾಮವನ್ನು ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಸ್ಪೀಕರ್ ತಿಳಿಸಿದ್ದಾರೆ.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಮಾರಂಭದಲ್ಲಿ ಕಲಾವಿದ ತೋನ್ಸೆ ವಿಜಯ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆ.ಡಿ.ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಪ್ರವೀಣ್ ಬೋಜ ಶೆಟ್ಟಿ, ರವೀಂದ್ರ ನಾಥ ಪಂಥದ ಭಂಡಾರಿ, ಧರ್ಮಪಾಲ ಯು ದೇವಾಡಿಗ, ಡಾ. ರವಿ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರಾದ ದಾಮೋದರ ನಿಸರ್ಗ, ವಿಜಯಲಕ್ಷ್ಮಿ ಬಿ. ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಪ್ರಧಾನ ಕಾರ್ಯದರ್ಶಿ ಮುಚ್ಚಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ, ರಾಜೇಶ್ ಆಳ್ವ, ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News