ಪುತ್ತೂರು: ಸಮಸ್ತ ಉಲಮಾ ಮುಶಾವರದಿಂದ 'ಗ್ರಾಂಡ್ ಮೀಲಾದ್ ಮಜ್ಲಿಸ್'

Update: 2024-09-09 13:34 GMT

ಪುತ್ತೂರು: ಸಮಸ್ತ ಉಲಮಾ ಮುಶಾವರ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರಿನ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ರವಿವಾರ 'ಗ್ರಾಂಡ್ ಮೀಲಾದ್ ಮಜ್ಲಿಸ್' ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಙಳ್ ಅವರು ಮಾತನಾಡಿ ಪುತ್ತೂರು ಜಂಯಿಯ್ಯತ್ತುಲ್ ಉಲಮಾ ಘಟಕವು ಧಾರ್ಮಿಕವಾಗಿ ಜನರಿಗೆ ಸಮರ್ಥ ನೇತೃತ್ವ ವಹಿಸುತ್ತಿದೆ. ಇಂದಿನ ಕೆಲ ಯುವಕರು ಸೋಶಿಯಲ್ ಮೀಡಿಯಾದ ಪ್ರಭಾವಕ್ಕೆ ಒಳಗಾಗಿ ತಾವು ನಡೆದು ಬಂದ ಪಾರಂಪರ್ಯ ಮೌಲ್ಯಗಳನ್ನು ತಿರಸ್ಕರಿಸಿ ಇತರ ವಿಚಾರಧಾರೆಗಳತ್ತ ಆಕರ್ಷಿತರಾಗಿ ಬದುಕು ಬರಡಾಗಿಸುತ್ತಿರುವುದು ಕಂಡು ಬರುತ್ತಿದೆ. ಎಳೆಯ ಪ್ರಾಯದಲ್ಲೇ ಮಕ್ಕಳ ಹೃದಯದಲ್ಲಿ ಪ್ರವಾದಿ ಪ್ರೇಮ ಬೆಳೆಸಲು ಮೀಲಾದ್ ಆಚರಣೆ ಉಪಯುಕ್ತವಾಗುತ್ತದೆ. ಪ್ರವಾದಿ ಪ್ರೇಮ ಹೃದಯಕ್ಕಿಳಿದರೆ ಮತ್ತೆ ಅಂತಹ ಮಕ್ಕಳು ಮಾದಕ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುವುದಿಲ್ಲ ಎಂದರು.

ಮಾಡನೂರು ಸಂಸ್ಥೆಯ ಅಡ್ವಕೇಟ್ ಹನೀಫ್, ಅರಸಿಮಕ್ಕಿ ಸಂಸ್ಥೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ ಉಪ್ಪಿನಂಗಡಿ ಮಾತನಾಡಿ ಪ್ರವಾದಿ ಚಿಂತನೆಯನ್ನು ಬೆಳೆಸುವಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.

ಸಯ್ಯಿದ್ ಯಹ್ಯಾ ತಂಙಳ್ ಪೋಲ್ಯ, ಮುಹಮ್ಮದ್ ತಂಙಳ್ ಸಾಲ್ಮರ, ಉಮರ್ ಮುಸ್ಲಿಯಾರ್ ನಂಜೆ, ಇಸ್ಮಾಯಿಲ್ ದಾರಿಮಿ ದೇಲಂಪಾಡಿ, ಇರ್ಷಾದ್ ಪೈಝಿ ಮುಕ್ವೆ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್, ನಿಕಟಪೂರ್ವ ಅಧ್ಯಕ್ಷ ಎಲ್ ಟಿ ರಝಾಕ್ ಹಾಜಿ, ಅಬ್ಬಾಸ್ ಮದನಿ ಪುತ್ತೂರು, ಕೆ ಪಿ ಮುಹಮ್ಮದ್ ಹಾಜಿ, ಹಸೈನಾರ್ ಹಾಜಿ ಸಿಟಿಬಜಾರ, ಕಲ್ಲಗ ಅಶ್ರಫ್, ಸಿರಾಜುದ್ದೀನ್ ಪೈಝಿ, ಉಮರ್ ಪೈಝಿ, ಇಬ್ರಾಹಿಂ ದಾರಿಮಿ ಮಾಡನ್ನೂರು, ಶಾಫಿ ಇರ್ಫಾನಿ ಕಲ್ಲಗ, ರಶೀದ್ ರಹ್ಮಾನಿ ಪರ್ಲಡ್ಕ, ಅಬೂಬಕರ್ ಮುಲಾರ್, ಹಾಜಿ ಅಬ್ದುಲ್ ಅಝೀಝ್ ಬಪ್ಪಳಿಗೆ, ಕರೀಂ ದಾರಿಮಿ ಕುಂಬ್ರ, ಯಾಕೂಬ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.

ಸಾಲ್ಮರ ಉಮರ್ ದಾರಿಮಿ ಪ್ರಸ್ತಾವನೆ ಗೈದರು.ಪ್ರಧಾನ ಕಾರ್ಯದರ್ಶಿ ಸಂಪ್ಯ ಉಸ್ತಾದ್ ಸ್ವಾಗತಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News