ಪುತ್ತೂರು: ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ವಜ್ರಾಭರಣಗಳ ಬೃಹತ್ ಪ್ರದರ್ಶನಕ್ಕೆ ಚಾಲನೆ
ಪುತ್ತೂರು: ನಗರದ ಏಳ್ಮುಡಿ ಎಂಬಲ್ಲಿರುವ ತಾಜ್ ಟವರ್‍ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ. 5ರಿಂದ 15ರ ತನಕ ನಡೆಯಲಿರುವ `ವಿಶ್ವ ವಜ್ರ-ಡೈಮಂಡ್ ಎಕ್ಷಿಬಿಷನ್' ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.
ವಜ್ರಾಭರಣಗಳ ಪ್ರದರ್ಶನವನ್ನು ವೈದ್ಯೆ ಡಾ.ಹಬೀನಾ ಶಾಯಿರಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸುಲ್ತಾನ್ ಮಳಿಗೆಯಲ್ಲಿ ಅಭರಣಗಳ ಸಾಕಷ್ಟು ಆಭರಣ ಸಂಗ್ರಹವಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮ ವಾಗಿದ್ದು, ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ. ಮಳಿಗೆಯಲ್ಲಿನ ಎಲ್ಲರೂ ಪ್ರಶಂಸನೀಯ ಸೇವೆ ನೀಡುತ್ತಿದ್ದಾರೆ ಎಂದರು.
ಅತಿಥಿಗಳಾಗಿದ್ದ ವಿಕ್ಟೋರಿಯಾ ಝೋನಲ್ ಕ್ಲಬ್ ಸದಸ್ಯೆ ಆಶಾ ಡಿಸೋಜಾ, ಸುಶ್ಮಾ ವಿ ಜೈನ್ ವಿಜಯವನ, ಸುಮಯ್ಯ ನವಾಝ್ ಮತ್ತು ನಸ್ರತ್ ಬಶೀರ್, ಶಿಕ್ಷಕಿ ಇಂದಿರಾ ಭಂಡಾರಿ ಡೈಮಂಡ್ ಎಸ್ಟೋ ಪ್ರದರ್ಶನದ ವಿವಿಧ ಸಂಗ್ರಹಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಡಿಸೋಜ ಅವರು ನಾನು ಕಳೆದ 3 ವರ್ಷಗಳಿಂದ ಈ ಮಳಿಗೆಯಲ್ಲಿನ ಗ್ರಾಹಕಿ ಆಗಿದ್ದೇನೆ. ಇಲ್ಲಿ ಖರೀದಿಸಿದ ಚಿನ್ನಾಭರಣಗಳು ನನಗೆ ತೃಪ್ತಿ ನೀಡಿದೆ. ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡ ಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.
ಶಿಕ್ಷಕಿ ಇಂದಿರಾ ಭಂಡಾರಿ ಮಾತನಾಡಿ ಈ ಸಂಸ್ಥೆಯೊಂದಿಗೆ ತನ್ನದು ಇತ್ತೀಚೆಗಿನ ಸಂಪರ್ಕವಾಗಿದೆ. ಅತ್ಯಲ್ಪ ಕಾಲ ದಲ್ಲಿಯೇ ಸುಲ್ತಾನ್ ಸಂಸ್ಥೆಯು ತನ್ನಂತಹ ಹಲವಾರು ಗ್ರಾಹಕರ ಮನಸ್ಸು ಗೆದ್ದಿದೆ. ಇಲ್ಲಿ ಉತ್ತಮ ವಜ್ರಾಭರಣಗಳ ಸಂಗ್ರಹವಿದೆ. ಜೊತೆಗೆ ಗ್ರಾಹಕರ ಬೇಡಿಕೆಗಳಿಗೆ ಇಲ್ಲಿ ಉತ್ತಮ ಸ್ಪಂಧನೆ ನೀಡುತ್ತಾರೆ.
ಅನ್ಲೆನ್ ಡಿಸೋಜ ಮಾತನಾಡಿ ನಂಬಿಕೆ ಮತ್ತು ಭರವಸೆಗಳಿಗೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆ ಇನ್ನೊಂದು ಹೆಸರಾಗಿದೆ ಎಂದರು.
ಅತಿಥಿಗಳನ್ನು ಸ್ವಾಗತಿಸಿದ ಪುತ್ತೂರು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಅವರು ಅತ್ಯಾಧು ನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ ಇಟಲಿ, ಫ್ರಾನ್ಸ್, ಅಮೇರಿಕಾ, ಬೆಲ್ಜಿಯಂ, ಸಿಂಗಾಪುರ, ಟರ್ಕಿ ಶೈಲಿಯ 4ಸಿ ಪರಿಪೂರ್ಣ ವಾದ ನೈಸರ್ಗಿಕ ವಜ್ರಾಭರಣಗಳ 10 ಸಾವಿರಕ್ಕೂ ಅಧಿಕ ಕ್ಯಾರೆಟ್‍ಗಳು ಲಭ್ಯವಿರಲಿದೆ. ಇದರಲ್ಲಿ ಪ್ರತೀ ಕ್ಯಾರೆಟ್ ಮೇಲೆ 8 ಸಾವಿರ ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಸೆ.5ರಿಂದ ಸೆ.15ರ ವರೆಗೆ ನಡೆಯುವ ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್ಸ್‍ಪೋ ವೀಕ್ಷಿಸಲು ಮತ್ತು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ವಜ್ರಾಭರಣಗಳ ಬೃಹತ್ ಪ್ರದರ್ಶನದ ಸದುಪಯೋಗಪಡೆದುಕೊಳ್ಳುವಂತೆ ವಿನಂತಿಸಿದರು.
ಸಂಸ್ಥೆಯ ಗ್ರಾಹಕ ಪ್ರಮಖರಾದ ಆಶ್ಲೆನ್ ಡಿಸೋಜ, ಜಾನ್ ಡಿಸೋಜ, ಶಿಕ್ಷಕಿ ಪ್ರಿಯಾ, ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಬಾಬು ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಅಮ್ರಾಝ್ ಮತ್ತಿತರರು ಉಪಸ್ಥಿತರಿದ್ದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.