ದ.ಕ.ಜಿಲ್ಲೆಯಲ್ಲಿ ತಗ್ಗಿದ ಮಳೆ
ಮಂಗಳೂರು, ಜು.28: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮಳೆ ತಗ್ಗಿದ್ದು, ಮಧ್ಯಾಹ್ನದ ವೇಳೆ ಸ್ವಲ್ಪ ಮಳೆಯಾಗಿದೆ. ಕೆಲಕಾಲ ಮೋಡ ಕವಿದ ವಾತಾವರಣ ವಿದ್ದರೂ ಕೂಡ ಉಳಿದಂತೆ ಬಿಸಿಲು ಕಾಣಿಸಿಕೊಂಡಿತ್ತು.
ಶನಿವಾರ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ ಜಿಲ್ಲೆಯಲ್ಲಿ 23 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 16 ಮಿಮೀ, ಬಂಟ್ವಾಳ 29.2 ಮಿಮೀ, ಮಂಗಳೂರು 27.4 ಮಿಮೀ, ಪುತ್ತೂರು 25.6 ಮಿಮೀ, ಸುಳ್ಯ 26.3 ಮಿಮೀ, ಮೂಡುಬಿದಿರೆ 28.2 ಮಿಮೀ, ಕಡಬ 21.2 ಮಿಮೀ ಮಳೆಯಾಗಿದೆ.
ಶುಕ್ರವಾರ ಸಂಜೆ 4ರ ವೇಳೆಗೆ ಬಂಟ್ವಾಳದಲ್ಲಿ ನೇತ್ರಾವತಿ ನದಿಯು 5.2 ಮೀ, ಉಪ್ಪಿನಂಗಡಿಯಲ್ಲಿ 26.2 ಮೀ. ಎತ್ತರದಲ್ಲಿ ಹರಿಯುತ್ತಿತ್ತು. ದಕ್ಷಿನ ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 37-47 ಕಿ.ಮೀ. ಇರುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸರಾಸರಿ 30.1ಡಿಗ್ರಿ ಗರಿಷ್ಠ, 23.1 ಕನಿಷ್ಟ ಉಷ್ಣಾಂಶ ದಾಖಲಾಗಿದೆ.