ಮೆಸ್ಕಾಂ ಕಚೇರಿ ಸ್ಥಳಾಂತರಿಸದಂತೆ ತಲಪಾಡಿ ಗ್ರಾಮಸ್ಥರ ಮನವಿ

Update: 2023-11-09 16:13 GMT

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಟೆಕಾರ್ ಬೀರಿಯಲ್ಲಿರುವ ಮೆಸ್ಕಾಂ ಉಪಕಚೇರಿ ಸ್ಥಳಾಂತ ರಕ್ಕೆ ಸಿದ್ಧತೆ ನಡೆಸಲಾಗಿದೆ. ಆದರೆ ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತಲಪಾಡಿ ಗ್ರಾಮಸ್ಥರು ಪಂಚಾಯತ್ ಮತ್ತು ಮೆಸ್ಕಾಂಗೆ ಮನವಿ ಸಲ್ಲಿಸಿದ್ದಾರೆ.

ಹಲವು ವರ್ಷಗಳಿಂದ ಕೋಟೆಕಾರ್ ಬೀರಿಯಲ್ಲಿ ಮೆಸ್ಕಾಂ ಉಪ ಕಚೇರಿ ಕಾರ್ಯಚರಿಸುತ್ತಿದೆ. ಇದರಿಂದ ಆಸುಪಾಸಿನ ಮೂರ್ನಾಲ್ಕು ಗ್ರಾಮಗಳ ಗ್ರಾಹಕರಿಗೆ ತುಂಬಾ ಅನುಕೂಲವಾಗಿದೆ. ಆದರೆ ಈಗ ಮೆಸ್ಕಾಂ ಕಚೇರಿಯನ್ನು ಏಕಾಏಕಿ ಕಿನ್ಯ ಗ್ರಾಮದ ಒಲವಿನ ಹಳ್ಳಿ ಪ್ರದೇಶಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಸ್ಥಳೀಯ ಮೂರು ಗ್ರಾಮಗಳ ನಿವಾಸಿಗಳಿಗೆ ತೊಂದರೆ ಆಗಲಿದೆ. ಒಲವಿನ ಹಳ್ಳಿ ಪ್ರದೇಶಕ್ಕೆ ಬೆರಳೆಣಿಕೆಯ ಬಸ್‌ಗಳಿದ್ದು ಅಗತ್ಯ ಕೆಲಸಕ್ಕಾಗಿ ಮೆಸ್ಕಾಂಗೆ ಹೋಗಲು ತುಂಬಾ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಯ ಕಚೇರಿಯನ್ನು ಹತ್ತಿರದ ರಾ.ಹೆ. ಪಕ್ಕದಲ್ಲೇ ತೆರೆದು ಸ್ಥಳೀಯ ಗ್ರಾಮಸ್ಥರಿಗೆ ಅನುಕೂಲಕರವಾದ ವಾತಾವರಣ ಕಲ್ಪಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತರಾದ ಶಂಶುದ್ದೀನ್ ಉಚ್ಚಿಲ್, ಸೋಶಿಯಲ್ ಫಾರೂಕ್, ಮುಸ್ತಫಾ ಕೆ.ಸಿ.ರೋಡ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News