ದಸರಾ ರಜೆ ಮುಂದೂಡದೆ ಶಾಲೆ ಪುನರಾರಂಭಿಸಲು ಮನವಿ

Update: 2023-10-22 17:45 GMT

ಫೈಲ್‌ ಫೋಟೊ 

ಮಂಗಳೂರು, ಅ.22: ಯಾವ ಕಾರಣಕ್ಕೂ ದಸರಾ ರಜೆಯನ್ನು ಮುಂದೂಡದೆ ತಕ್ಷಣ ಶಾಲಾ ತರಗತಿಗಳನ್ನು ಪುನರಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 800 ಗಂಟೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ 1000 ಗಂಟೆಗಳ ಪಾಠ ಆಗಬೇಕಿದೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಗಂಟೆಗಳು ಈಗಾಗಲೇ ಕಡಿಮೆ ಇದೆ, ಅದಲ್ಲದೆ ಸರಕಾರಿ ನೌಕರರ ಅನಧಿಕೃತ ಒಂದು ದಿನದ ಗೈರು ಹಾಜರಿ, ಮಳೆಗಾಲದ ರಜೆಗಳು ಸೇರಿ ಸುಮಾರು 50 ರಿಂದ 60 ಗಂಟೆಗಳ ಪಾಠ ಪ್ರವಚನ ನಡೆದಿರುವುದಿಲ್ಲ, ಇದರೊಂದಿಗೆ ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳ ಹೆಸರಲ್ಲಿ ಹೆಚ್ಚಿನ ಶಿಕ್ಷಕರು ಶಾಲೆಯಿಂದ ಹೊರಗೆ ಇದ್ದ ಕಾರಣ ಪಾಠಗಳು ನಡೆದಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರಕಿಸಿ ಕೊಡುವಲ್ಲಿ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳಿಗೆ ಕಲಿಕೆ ಆಗುವ ರೀತಿಯಲ್ಲಿ ರಜೆಯನ್ನು ಮುಂದೂಡದೆ ಅ.25ರಿಂದಲೇ ಶಾಲೆಯನ್ನು ತೆರೆದು ಪಾಠ ಪ್ರವಚನ ನಡೆಯಲು ಅನುವು ಮಾಡಿ ಕೊಡಬೇಕು ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News