ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ : ಆರೋಪಿ ಸೆರೆ

Update: 2023-11-14 14:22 GMT

ರೋಕೇಶ್

ಉಳ್ಳಾಲ: ಸಹೋದ್ಯೋಗಿಗೆ ಹಲ್ಲೆಗೈದ ಆರೋಪಿ ಕುಂಪಲದ ರಿಕ್ಷಾ ಚಾಲಕನನ್ನು ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಬಂಧಿತ ಆರೋಪಿಯನ್ನು ಕುಂಪಲ ನಿವಾಸಿ ರೋಕೇಶ್ (37) ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ ಕುಂಪಲ ಬೈಪಾಸ್ ನಲ್ಲಿ ಆಟೋ ರಿಕ್ಷಾ ಪಾರ್ಕಿನಲ್ಲಿದ್ದ ರಿಕ್ಷಾ ಚಾಲಕ ಶುಶಾಂತ್ (31) ಎಂಬವರಿಗೆ ಅದೇ ಪಾರ್ಕಿನಲ್ಲಿ ರಿಕ್ಷಾ ಚಾಲನೆ ಮಾಡುತ್ತಿರುವ ರೋಕೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದ ಎಂದು ದೂರಲಾಗಿತ್ತು. ಗಾಯಗೊಂಡಿದ್ದ ಶುಶಾಂತ್ ರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಆರೋಪಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ರೋಕೇಶ್ ನನ್ನು ಉಳ್ಳಾಲ ಪೊಲೀಸ್ ಠಾಣೆಯ ಪಿಐ ಬಾಲಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News