ಮಾ.1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ದ.ಕ. ಜಿಲ್ಲೆಯಲ್ಲಿ 36,147 ವಿದ್ಯಾರ್ಥಿಗಳ ನೋಂದಣಿ

Update: 2024-02-28 14:25 GMT

ಸಾಂದರ್ಭಿಕ ಚಿತ್ರ 

ಮಂಗಳೂರು: ಪ್ರಸಕ್ತ (2023-24) ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಮಾ.1ರಿಂದ ಆರಂಭಗೊಳ್ಳಲಿದ್ದು, ದ.ಕ. ಜಿಲ್ಲೆಯಲ್ಲಿ 36,147 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಹೆಸರು ನೋಂದಾಯಿಸಿದ್ದಾರೆ ಎಂದು ಡಿಡಿಪಿಯು ಮಾಹಿತಿ ನೀಡಿದ್ದಾರೆ.

ರೆಗ್ಯುಲರ್ ಆಗಿ 34,125, ಖಾಸಗಿಯಾಗಿ 1,635, ಪುನರಾವರ್ತಿತರಾಗಿ 387 ವಿದ್ಯಾರ್ಥಿಗಳ ಸಹಿತ 36,147 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಸರಕಾರಿ 15, ಅನುದಾನಿತ 21, ಅನುದಾನ ರಹಿತ 17 ಸಹಿತ 53 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ ಮಂಗಳೂರು ತಾಲೂಕಿನ 18, ಉಳ್ಳಾಲದ 4, ಮುಲ್ಕಿ ಮತ್ತು ಸುಳ್ಯದ ತಲಾ 2, ಬಂಟ್ವಾಳ ಮತ್ತು ಬೆಳ್ತಂಗಡಿಯ ತಲಾ 6, ಪುತ್ತೂರು ಮತ್ತು ಮೂಡುಬಿದಿರೆ ಹಾಗೂ ಕಡಬ ತಾಲೂಕಿನ ತಲಾ 5 ಕೇಂದ್ರಗಳು ಸೇರಿವೆ. ಪರೀಕ್ಷೆಯು ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News