ದ್ವಿತೀಯ ಪಿಯುಸಿ ಪರೀಕ್ಷೆ : ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿಗೆ 95% ಫಲಿತಾಂಶ
Update: 2025-04-08 15:51 IST

ಸಂಬ್ರೀನಾ ಬಾನು/ಮಹ್ರೂಪ/ಸಲೀಮಾ ಮುಹಮ್ಮದ್
ಮಂಗಳೂರು : ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಫಲಿತಾಂಶ ದಾಖಲಿಸಿದೆ.
ಕಲಾ ವಿಭಾಗದ ಸಂಬ್ರೀನಾ ಬಾನು 544 ಅಂಕ, ವಾಣಿಜ್ಯ ವಿಭಾಗದ ಮಹ್ರೂಪ 539 ಅಂಕ ಹಾಗೂ ವಿಜ್ಞಾನ ವಿಭಾಗದ ಸಲೀಮಾ ಮುಹಮ್ಮದ್ 526 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 10 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ, 70 ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ.ಎಸ್. ಎಂ.ರಶೀದ್ ಹಾಜಿ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಕೋರಿದ್ದಾರೆ.