ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಕರ್ನಾಟಕ ವತಿಯಿಂದ ಮೀಲಾದ್ ಕಾನ್ಫರೆನ್ಸ್, ಪ್ರಶಸ್ತಿ ಪ್ರದಾನ ಸಮಾರಂಭ

Update: 2023-10-13 09:34 GMT

ಅಬುಧಾಬಿ, ಅ.10 : ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಕರ್ನಾಟಕ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಅಬುಧಾಬಿಯ ಮದೀನತ್ ಝಾಯೆದ್ ಶಾಪಿಂಗ್ ಸೆಂಟರ್ ನ ಪಾರ್ಟಿ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಬುಧಾಬಿ ಸುನ್ನೀ ಸೆಂಟರ್ ಅಧ್ಯಕ್ಷ ಅಸ್ಸೈಯದ್ ಅಬ್ದುಲ್ ರಹ್ಮಾನ್ ತಂಙಳ್ ಅವರು, ಇಂದಿನ ಕಾಲಘಟ್ಟದಲ್ಲಿ ಮೀಲಾದ್ ನಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಕರಲ್ಲಿ ಧಾರ್ಮಿಕ ಜ್ಞಾನವನ್ನು ಬೆಳೆಸಲು ಸಾಧ್ಯ. ಎಲ್ಲರನ್ನೂ ಒಂದೇ ಸೂರಿನಡಿ ಒಗ್ಗೂಡಿಸಲು ಉತ್ತಮ ವೇದಿಕೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷ ಶಹೀರ್ ಹುದವಿ ಉಸ್ತಾದ್, ಪ್ರವಾದಿ (ಸ) ರವರು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡಿದ ಗೌರವ ಹಾಗೂ ಪ್ರೀತಿಯ ಬಗ್ಗೆ ವಿವರಿಸಿದರು.

ಯಾಸೀರ್ ಬೋಳಿಯಾರ್ ಕಿರಾಅತ್ ಪಠಿಸಿದರು. ಎಸ್ಕೆಎಸ್ಸೆಸ್ಸೆಫ್ ಯುಎಇ ಕರ್ನಾಟಕದ ರಾಜ್ಯಾಧ್ಯಕ್ಷ ಅಸ್ಸೈಯದ್ ಅಸ್ಕರ್ ಅಲಿ ತಂಙಳ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಮೀಲಾದ್ ಕಾನ್ಫ್ ರೆನ್ಸ್ ಪ್ರಯುಕ್ತ ಪುಟಾಣಿ ಮಕ್ಕಳ ಕಾರ್ಯಕ್ರಮಕ್ಕೆ ಉಸ್ತಾದ್ ಹಸನ್ ದಾರಿಮಿ ದುಆ ಮೂಲಕ ಚಾಲನೆ ನೀಡಿದರು. ಸುಮಾರು 35 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಕ್ಕಳ ವಿವಿಧ ಸಾಸ್ಕೃತಿಕ ಕಾರ್ಯಕ್ರಮಗಳು ಇನ್ನಷ್ಟು ಮೆರುಗು ನೀಡಿತು.


ಕಾರ್ಯಕ್ರಮದಲ್ಲಿ ಸುದೀರ್ಘ ಪ್ರವಾಸಿ ಜೀವನದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸೇವೆಗಳಿಗಾಗಿ ಹಿರಿಯ ಸುನ್ನೀ ನೇತಾರ ಹಾಜಿ ಮೊಯಿದಿನ್ ಕುಟ್ಟಿ ಕಕ್ಕಿಂಜೆ (ದಿಬ್ಬ) ಹಾಗೂ ಬದ್ರುದ್ದೀನ್ ಹೆಂತಾರ್ (ಪ್ರಧಾನ ಕಾರ್ಯದರ್ಶಿ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಷ್ಟ್ರೀಯ ಸಮಿತಿ) ರಿಗೆ ಎಸ್ಕೆಎಸ್ಸೆಸ್ಸೆಫ್ ಪಿನಾಕಲ್ ಅವಾರ್ಡ್ 2023 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.


ಸಂಸ್ಥೆಯ ಗೌರವಾಧ್ಯಕ್ಷ ಹನೀಫ್ ಹರಿಯಮೂಲೆ ಪ್ರಾಸ್ತಾವಿಕ ಭಾಷಣ ಮಾಡಿದರು. ಉಸ್ತಾದ್ ರಖೀಬ್ ಹುದವಿಯವರು ದುಆ ನೆರವೇರಿಸಿದರು. ಬುರ್ದಾ ಮಜ್ಲಿಸ್, ಇಷ್ಕೇ ಮಜ್ಲಿಸ್ ಬಳಿಕ ಅನ್ನದಾನ ನಡೆಯಿತು.


ಹಾಫಿಲ್ ಝೈನ್ ಸಖಾಫಿ ಸ್ವಾಗತಿಸಿದರು. ಶಾಕೀರ್ ಕೂರ್ನಡ್ಕ ಹಾಗೂ ಅಶ್ರಫ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಯಹ್ಯಾ ಕೊಡ್ಲಿಪೇಟೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News